ಮಣಿಪಾಲ: 30 ಏಪ್ರಿಲ್ ಶನಿವಾರದಂದು ಮಣಿಪಾಲ್ ಸ್ಕೂಲ್ ಆಫ್ ಲೈಫ್ ಸೈನ್ಸಸ್, ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮತ್ತು ಬಯೋನೆಸ್ಟ್ ಮಣಿಪಾಲ,ಕರ್ನಾಟಕ ಸರಕಾರದ ಬಯೋಇನ್‌ಕ್ಯುಬೇಟರ್ ಜಂಟಿ ಆಶ್ರಯದಲ್ಲಿ ನಾವೀನ್ಯತೆ ಮತ್ತು ಉದ್ಯಮಶೀಲತೆಯ ಗುರಿಗಳು ನಾಯಕತ್ವ ಸರಣಿಯನ್ನು ಆಯೋಜಿಸಲಾಗಿತ್ತು.
ಎಂಟರ್ ಪ್ರೂನರ್ಶಿಪ್ ಡೆವೆಲಪ್ಮೆಂಟ್, ಬಿ.ಐ.ಆರ್.ಎ.ಸಿ, ಡಿಬಿಟಿ, ನವದೆಹಲಿ ಇದರ ಡಿಜಿಎಮ್ ಮತ್ತು ಮುಖ್ಯಸ್ಥ-ಡಾ. ಮನೀಶ್ ದಿವಾನ್ ಮುಖ್ಯ ಅತಿಥಿಯಾಗಿ ಸಮಾರಂಭದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಜೈವಿಕ ತಂತ್ರಜ್ಞಾನ ಉದ್ಯಮ ಸಂಶೋಧನೆ ಸಹಾಯ ಮಂಡಳಿ, ಭಾರತ ಸರಕಾರದ ಜೈವಿಕ ತಂತ್ರಜ್ಞಾನ ಇಲಾಖೆಯು ಸ್ಥಾಪಿಸಿದ ಪ್ರಮುಖ ಯೋಜನೆಯಾಗಿದ್ದು, ಇದು ಉದಯೋನ್ಮುಖ ಜೈವಿಕ ತಂತ್ರಜ್ಞಾನವನ್ನು ಬಲಪಡಿಸಲು ಮತ್ತು ಸಶಕ್ತಗೊಳಿಸಲು ಇಂಟರ್ಫೇಸ್ ಏಜೆನ್ಸಿ ಉದ್ಯಮವಾಗಿದೆ. ರಾಷ್ಟ್ರೀಯವಾಗಿ ಸಂಬಂಧಿತ ಉತ್ಪನ್ನವನ್ನು ಉದ್ದೇಶಿಸಿ ಅಭಿವೃದ್ಧಿ ಅಗತ್ಯಗಳಿಗಾಗಿ ಕಾರ್ಯತಂತ್ರದ ಸಂಶೋಧನೆ ಮತ್ತು ನಾವೀನ್ಯತೆಯನ್ನು ಕೈಗೊಳ್ಳಲು ಇದನ್ನು ಸ್ಥಾಪಿಸಲಾಗಿದೆ ಎಂದರು.
ಮಾಹೆ ಆವರಣದಲ್ಲಿ ಉದ್ಘಾಟನೆಯಾಗಿರುವ ಬಯೋನೆಸ್ಟ್- ಬಯೋ ಇನ್ಕ್ಯುಬೇಟರ್ ಸೌಲಭ್ಯದ ಪ್ರಯೋಜನವನ್ನು ಪಿಎಚ್‌ಡಿ ವಿದ್ವಾಂಸರು ಮತ್ತು ಯುವ ಸಂಶೋಧಕರು ಪಡೆದುಕೊಳ್ಳುವಂತೆ ಕರೆ ನೀಡಿದರು. ಬಳಿಕ ಸಭಿಕರೊಂದಿಗೆ ಸಂವಾದ ಕಾರ್ಯಕ್ರಮವನ್ನು ನಡೆಸಲಾಯಿತು.
ಕರ್ನಾಟಕ ಸರಕಾರ ಬಯೋಇನ್ಕ್ಯುಬೇಟರ್ ಮಾಹೆ, ಮಣಿಪಾಲದ ಸಿಇಒ ಡಾ. ಮನೇಶ್ ಥಾಮಸ್ ಸಂವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಮಣಿಪಾಲ ಸ್ಕೂಲ್ ಆಫ್ ಲೈಫ್ ಸೈನ್ಸ್ ನ ನಿರ್ದೇಶಕ ಡಾ.ಕೆ. ಸತ್ಯಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.












