ನಕಲಿ ಪ್ರಕರಣ ದಾಖಲಿಸಿದ ವಕೀಲನಿಗೆ ಜೀವಾವಧಿ ಶಿಕ್ಷೆ; ನ್ಯಾಯಾಲಯ ತೀರ್ಪು

ಲಖನೌ: ದಲಿತ ಮಹಿಳೆಯ ಗುರುತನ್ನು ದುರುಪಯೋಗಪಡಿಸಿಕೊಂಡು ಎದುರಾಳಿಗಳ ವಿರುದ್ಧ ನಕಲಿಪ್ರಕರಣಗಳನ್ನು ದಾಖಲಿಸಿದ ವಕೀಲನಿಗೆ ಲಖನೌನ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು 5.10 ಲಕ್ಷ ರೂ. ದಂಡ ವಿಧಿಸಿದೆ. ವಿಶೇಷ ನ್ಯಾಯಾಧೀಶ (ಎಸ್​ಸಿ/ಎಸ್​ಟಿ ದೌರ್ಜನ್ಯ ತಡೆ ಕಾಯ್ದೆ) ವಿವೇಕಾನಂದ ಶರಣ್ ತ್ರಿಪಾಠಿ ವಕೀಲ ಪರಮಾನಂದ ಗುಪ್ತಾ ಎಂಬ ವಕೀಲನಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ವಿಚಾರಣೆ ವೇಳೆ ವಿಷಯ ಬೆಳಕಿಗೆ:

ರಾವತ್ ಎಂಬಾತನೊಂದಿಗೆ ಶಾಮೀಲಾಗಿದ್ದ ಗುಪ್ತಾ ತನ್ನ ಎದುರಾಳಿ ಪಕ್ಷದ ವಿರುದ್ಧ ತಾನು 18 ಪ್ರಕರಣಗಳನ್ನು ಮತ್ತು ರಾವತ್ ಮೂಲಕ 11 ಪ್ರಕರಣಗಳನ್ನು ದಾಖಲಿಸಿದ್ದ. ಇವುಗಳಲ್ಲಿ ಕೆಲವು ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಇದ್ದರೆ, ಕೆಲವು ಪ್ರಕರಣಗಳು ಅತ್ಯಾಚಾರ ಮತ್ತು ಕಿರುಕುಳ ಆರೋಪ ಹೊರಿಸಿಯೂ ದಾಖಲಿಸಿದ್ದ. ಅಲಹಾಬಾದ್ ಹೈಕೋರ್ಟ್ ನಲ್ಲಿ ಅರ್ಜಿಗಳು ವಿಚಾರಣೆಗೆ ಬಂದಾಗ ಈ ವಿಷಯ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ 2025ರ ಮಾರ್ಚ್ 5 ರಂದು ಹೈಕೋರ್ಟ್ ಸಿಬಿಐ ತನಿಖೆಗೆ ಆದೇಶಿಸಿತ್ತು.