ಉಡುಪಿ: ರಾಜ್ಯ ಸರಕಾರದ ವೇ ಸೈಡ್ ಅಮೇನಿಟೀಸ್ (ದಾರಿ ಬದಿ ಸೌಕರ್ಯ) ಯೋಜನೆಯಡಿ ವಾಹನದ ಚಾಲಕರಿಗೆ ರಾಷ್ಟ್ರೀಯ ಹೆದ್ದಾರಿಯ ಬಳಿ ಮೂಲ ಸೌಕರ್ಯ ಒದಗಿಸಲು ಜಿಲ್ಲೆಯ ಕುಂದಾಪುರ ಮತ್ತು ಬೈಂದೂರು ಹಾಗೂ ಪಡುಬಿದ್ರೆ ಮತ್ತು ಹೆಜಮಾಡಿಯ ಮಧ್ಯೆ ರಾಷ್ಟ್ರೀಯ ಹೆದ್ದಾರಿಯ 2 ಬದಿ ಸುಮಾರು 5 ರಿಂದ 10 ಎಕರೆ ಖಾಲಿ ನಿವೇಶನದ ಅವಶ್ಯಕತೆ ಇದ್ದು, ಆಸಕ್ತಿಯುಳ್ಳ ಜಾಗದ ಮಾಲೀಕರು ಮಾರಾಟ ಮಾಡಲು ಇಚ್ಚಿಸಿದ್ದಲ್ಲಿ ಪ್ರಕಟಣೆಯ ಒಂದು ವಾರದ ಒಳಗಾಗಿ ತಮ್ಮ ಜಾಗದ ಮೂಲ ದಾಖಲೆಗಳೊಂದಿಗೆ ಪ್ರಾದೇಶಿಕ ಸಾರಿಗೆ ಅಧಿಕಾರಿ, ಉಡುಪಿ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.