ಗಣಿತ ನಗರ: ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಮಹಾತ್ಮಗಾಂಧಿಯವರ 153ನೇ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿಯವರ 118ನೇ ಜನ್ಮ ಜಯಂತಿಯನ್ನು ಆಚರಿಸಲಾಯಿತು.
ಕುಕ್ಕುಂದೂರಿನ ಉದ್ಯಮಿ ತ್ರಿವಿಕ್ರಮ ಕಿಣಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿದರು.
ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ, ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ದಿನೇಶ್.ಎಂ. .ಕೊಡವೂರ್, ಕಾರ್ಕಳ ಜ್ಞಾನಸುಧಾ ಆಂಗ್ಲಮಾದ್ಯಮ ಪ್ರೌಢಶಾಲೆಯ ಪ್ರಾಂಶುಪಾಲೆ ಉಷಾ.ರಾವ್.ಯು, ಉಪಪ್ರಾಂಶುಪಾಲೆ ವಾಣಿ ಜಯಶೀಲ್, ಸಂಸ್ಥೆಯ ಎನ್.ಎಸ್.ಎಸ್.ಕಾರ್ಯಕ್ರಮಾಧಿಕಾರಿ ರವಿ.ಜಿ., ಡೀನ್‌ಸ್ಟೂಡೆಂಟ್ ಅಪೈರ್ ಶಕುಂತಳಾ.ಎಂ. ಸುವರ್ಣ, ಸಂಸ್ಥೆಯ ಹಿತೈಷಿ ದೇವೇಂದ್ರ ನಾಯಕ್ ಉಪಸ್ಥಿತರಿದ್ದರು.
ಗಾಂಧಿ ಜಯಂತಿಯ ಅಂಗವಾಗಿ ಸಾಲ್ಮರದ ಸುರಕ್ಷಾ ಸೇವಾಶ್ರಮ ಹಾಗೂ ಕುಕ್ಕುಂದೂರಿನ ವಿಜೇತ ವಿಶೇಷ ಮಕ್ಕಳ ಶಾಲೆಗೆ ಭೇಟಿ ನೀಡಿ ಹಣ್ಣುಹಂಪಲು ವಿತರಿಸಲಾಯಿತು. ಸಂಸ್ಥೆಯ ವಿದ್ಯಾರ್ಥಿಗಳ ಜೊತೆಗೆ ಡೀನ್ ಸ್ಟೂಡೆಂಟ್ ಅಪೈರ್ ಶಕುಂತಳಾ.ಎಂ.ಸುವರ್ಣ, ಉಪನ್ಯಾಸಕಿಯರಾದ ಸಂಗೀತ ಕುಲಾಲ್, ಶಮಿತಾ, ಉಪನ್ಯಾಸಕರಾದ ಸುದರ್ಶನ್ ಮೂಲ್ಯ, ಶಿಕ್ಷಕಿಯರಾದ ಶಿಲ್ಪಾ, ಗಾಯತ್ರಿ, ದೈಹಿಕ ಶಿಕ್ಷಕ
ಕಿರಣ್, ಸೇವಾಪಾಲಕ ಅಜಯ್, ಡ್ರೈವರ್ ಚಂದ್ರಶೇಖರ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಂಸ್ಥೆಯ ಆವರಣದಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಯಿತು.












