ಕಾರ್ಕಳ: ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಲಕ್ಷದೀಪೋತ್ಸವದ ಸಂಭ್ರಮ

ಕಾರ್ಕಳ: ಪಡುತಿರುಪತಿ ಖ್ಯಾತಿಯ ಶ್ರೀ ವೆಂಕಟರಮಣ ದೇವಸ್ಥಾನದ ಲಕ್ಷದೀಪೋತ್ಸವ ಸಂಭ್ರಮ ಇಂದಿನಿಂದ ಜರುಗಲಿರುವುದು. ಇಂದು ಕೆರೆ ದೀಪೋತ್ಸವ ನಡೆಯಲಿದ್ದು, ನಾಳೆ ಲಕ್ಷದೀಪೋತ್ಸವ ಹಾಗೂ ಡಿ.3 ರಂದು ಅವಭೃತ ವರ್ಣಮಯ ಓಕುಳಿ ನಡೆಯಲಿರುವುದು.

ಸಂಚಾರದಲ್ಲಿ ಬದಲಾವಣೆ:

ಇಂದು ಬಂಡಿಯಲ್ಲಿ ಗರುಡ ವಾಹನ ಉತ್ಸವ ಹಾಗೂ ಕೆರೆದೀಪ ನಡೆಯಲಿರುವುದರಿಂದ ರಾತ್ರಿ 8 ಗಂಟೆಯಿಂದ 12 ರ ವರೆಗೆ ಘನ ವಾಹನಗಳು ಬಂಗ್ಲೆಗುಡ್ಡೆ ಯಿಂದ ಪುಲ್ಕೆರಿ ಮಾರ್ಗವಾಗಿ ಸಂಚರಿಸಬೇಕು. ಕಾರ್ಕಳದಿಂದ ಜೋಡುರಸ್ತೆ ಕಡೆಗೆ ಹಾಗೂ ಜೋಡು ರಸ್ತೆಯಿಂದ ಕಾರ್ಕಳ ಕಡೆಗೆ ಸಂಚರಿಸುವ ಬಸ್ ಗಳು ತಾಲೂಕು ಜಂಕ್ಷನ್ ನಿಂದ ಕಲ್ಲೊಟ್ಟೆ , ಮಾರ್ಕೆಟ್ ಮಾರ್ಗವಾಗಿ ಬಸ್ ನಿಲ್ದಾಣ ಪ್ರವೇಶಿಸಬೇಕು. ಲಘು ವಾಹನಗಳು ಸ್ಟೇಟ್ ಬ್ಯಾಂಕ್ ಜಂಕ್ಷನ್ ನಿಂದ ಗಾಂಧಿ ಮೈದಾನ ವಾಗಿ ಕಾಮಧೇನು ಹೋಟೆಲ್ ಜಂಕ್ಷನ್ ಮಾರ್ಗವಾಗಿ ಸಂಚರಿಸಬೇಕು.

ಡಿ. 2 ರಂದು ಲಕ್ಷ ದೀಪೋತ್ಸವ ಹಾಗೂ ವನ ಭೋಜನ ಉತ್ಸವ ನಡೆಯಲಿರುವುದರಿಂದ ಅಂದು ಬೆಳಗ್ಗೆ 10 ಗಂಟೆ ಯಿಂದ ಮರುದಿನ 6 ಗಂಟೆಯವರೆಗೆ ಮತ್ತು ಡಿ. 3 ರಂದು ಓಕುಳಿ ಉತ್ಸವ ಹಾಗೂ ಪಲ್ಲಕ್ಕಿ ಉತ್ಸವ ನಡೆಯುವುದರಿಂದ ಅಂದು ಸಂಜೆ 4 ಗಂಟೆಯಿಂದ ಮರುದಿನ ಬೆಳಗ್ಗೆ 4 ಗಂಟೆಯವರೆಗೆ ಘನ ವಾಹನಗಳು ಬಂಗ್ಲೆಗುಡ್ಡೆ ಯಿಂದ ಹಿರಿಯಂಗಡಿ, ಪುಲ್ಕೆರಿ ಮಾರ್ಗವಾಗಿ, ಕಾರ್ಕಳದಿಂದ ಜೋಡು ರಸ್ತೆ ಕಡೆಗೆ ಸಂಚರಿಸುವ ಬಸ್ ಗಳು ತಾಲೂಕು ಜಂಕ್ಷನ್ ನಿಂದ ಕಲ್ಲೊಟ್ಟೆ, ಮಾರ್ಕೆಟ್ ಮಾರ್ಗವಾಗಿ ಬಸ್ ನಿಲ್ದಾಣ ಪ್ರವೇಶಿಸಬೇಕು. ಲಘು ವಾಹನಗಳು ಸ್ಟೇಟ್ ಬ್ಯಾಂಕ್ ಜಂಕ್ಷನ್ ನಿಂದ ಗಾಂಧಿ ಮೈದಾನ, ಪೋಸ್ಟ್ ಆಫೀಸ್ ಮಾರ್ಗವಾಗಿ ಕಾಮಧೇನು ಹೋಟೆಲ್ ಜಂಕ್ಷನ್ ಮೂಲಕ ಸಂಚರಿಸಲು ಅನುವು ಮಾಡಿಕೊಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಕೆ ಆದೇಶ ಹೊರಡಿಸಿದ್ದಾರೆ.