ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಬಂಟ್ವಾಳ ಮತ್ತು ಎಲ್.ಸಿ.ಆರ್ ಇಂಡಿಯನ್ ವಿದ್ಯಾಸಂಸ್ಥೆ ಕಕ್ಯಪದವು ಇದರ ಸಂಯುಕ್ತ ಆಶ್ರಯದಲ್ಲಿ ವಾಮದಪದವು ವಲಯ ಮಟ್ಟದ ಫ್ರೌಡ ಹಾಗೂ ಪ್ರಾಥಮಿಕ ವಿಭಾಗದ ತ್ರೋಬಾಲ್ ಪಂದ್ಯಾಟವನ್ನು ಪತ್ರಕರ್ತ ಯಾದವ್‌ಕುಲಾಲ್ ಆ.19 ರಂದು ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ಎಲ್.ಸಿ.ಆರ್ ಇಂಡಿಯನ್ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಪ್ರವೀಣ್ ಎ. ವಹಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕರು, ಬಂಟ್ವಾಳ ತಾಲೂಕಿನ ಪ್ರಾಥಮಿಕ ಶಿಕ್ಷಕ ಸಂಘದ ಕಾರ್ಯದರ್ಶಿ ಜಯರಾಮ್ ಕಾವಲು ಕಟ್ಟೆ, ಶ್ರೀ ಪಂಚದುರ್ಗಾ ಫ್ರೌಡ ಶಾಲೆ ಕಕ್ಯಬೀಡು ಇಲ್ಲಿಯ ಮುಖ್ಯಶಿಕ್ಷಕ ಜಗನ್ನಾಥ ಶೆಟ್ಟಿ, ಪ್ರಾಥಮಿಕ ಶಾಲೆ ಉಳಿ ಕಕ್ಯಪದವಿನ ಮುಖ್ಯಶಿಕ್ಷಕ ರಾಮ ಪಿ ಸಾಲ್ಯಾನ್, ಎಲ್.ಸಿ.ಆರ್ ಇಂಡಿಯನ್ ಸ್ಕೂಲ್‌ಕಕ್ಯಪದವು ಇಲ್ಲಿನ ಮುಖ್ಯಶಿಕ್ಷಕಿ ನಿಶಾ ಬಿ, ವಾಣಿಜ್ಯ ವಿಭಾಗದ ಮುಖ್ಯಸ್ಥ ಶಿವರಾಜ್ ಗಟ್ಟಿ, ದೈಹಿಕ ಶಿಕ್ಷಕಿ ಹರಿಣಾಕ್ಷಿ, ಎಲ್.ಸಿ.ಆರ್ ಇಂಡಿಯನ್ ವಿದ್ಯಾಸಂಸ್ಥೆಯ ಎಲ್ಲ ಬೋಧಕ, ಬೋದಕೇತರ ವರ್ಗದವರು ಭಾಗವಹಿಸಿದ್ದರು.
ಸಹ ಮುಖ್ಯಶಿಕ್ಷಕಿ ವಿಜಯ ಕೆ. ಸ್ವಾಗತಿಸಿ, ಸಹಶಿಕ್ಷಕರಾದ ಸೌಮ್ಯ ಬಿ ಆರ್ ವಂದಿಸಿ ಸಂಗೀತಾಎಚ್, ಭವ್ಯಎಮ್ ನಿರೂಪಿಸಿದರು.