ಬಂಟ್ವಾಳ: ಎಲ್ ಸಿ ಆರ್ ವಿದ್ಯಾಸಂಸ್ಥೆ ಕಕ್ಯಪದವು ಇಲ್ಲಿನ ವಾರ್ಷಿಕ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವನ್ನು ಸೇವಾ ಸಹಕಾರಿ ಬ್ಯಾಂಕ್, ಕಕ್ಯಪದವು ಇಲ್ಲಿನ ಪ್ರಬಂಧಕ ನಾರಾಯಣ ಇವರು ನೆರವೇರಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಸಂಚಾಲಕ ರೋಹಿನಾಥ ಪಾದೆ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡಾ ಮನೋಭಾವನೆಯನ್ನು ಬೆಳೆಸಿಕೊಂಡು ಅತ್ಯುತ್ತಮ ಕ್ರೀಡಾಪಟುಗಳಾಗಿ ಬೆಳೆಯಬೇಕೆಂದು ಶುಭಹಾರೈಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಉಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುರೇಶ್ ಮೈರಾ ಮಾತನಾಡಿ, ವಿದ್ಯಾರ್ಥಿಗಳ ಸಾಧನೆಗೆ ಪ್ರತೀಕವಾದ ಕ್ರೀಡೆಯಲ್ಲಿ ಎಲ್ಲರೂ ಏಕಮನಸ್ಕರಾಗಿ ಪಾಲ್ಗೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಶ್ರೀನಿವಾಸ್ಗೌಡ ದೈಹಿಕ ನಿರ್ದೆಶಕರು ಸತ್ಯಸಾಯಿ ಲೋಕ ಸೇವಾ ವಿದ್ಯಾಸಂಸ್ಥೆ ಅಳಿಕೆ, ಡೀಕಯ್ಯ ಬಂಗೇರ ಕೆಳಗಿನ ಕರ್ಲ ಪ್ರಗತಿಪರ ಕೃಷಿಕರು, ಗುರುಪ್ರಸಾದ್ ಲೆಕ್ಕಿಗರು ಸೇವಾ ಸಹಕಾರಿ ಬ್ಯಾಂಕ್ಕಕ್ಯಪದವು, ಪುರುಷೋತ್ತಮ ಗೌಡದೈಹಿಕ ಶಿಕ್ಷಕರು ಶ್ರೀ ಪಂಚದುರ್ಗಾ ಫ್ರೌಡ ಶಾಲೆ ಕಕ್ಯಬೀಡು, ನಿಶಾ ಬಿ ಮುಖ್ಯ ಶಿಕ್ಷಕಿ ಪ್ರಾಥಮಿಕ ವಿಭಾಗ, ಶಿವರಾಜ್ ಗಟ್ಟಿ ಯೋಜನಾಧಿಕಾರಿಗಳು ಹಾಗೂ ಮುಖ್ಯಸ್ಥರು ವಾಣಿಜ್ಯ ವಿಭಾಗದಉಪನ್ಯಾಸಕರು ಮತ್ತು ಹರಿಣಾಕ್ಷಿಜಿ.ಕೆ. ದೈಹಿಕ ಶಿಕ್ಷಕಿ ಪ್ರಾಥಮಿಕ ವಿಭಾಗಇವರು ಉಪಸ್ಥಿತರಿದ್ದರು.
ಸಂಸ್ಥೆಯ ಪ್ರಾಂಶುಪಾಲರಾದ ಪ್ರವೀಣ್ ಎ ಪ್ರತಿಜ್ಞಾವಿಧಿ ಬೋಧಿಸಿದರು. ಕಾಲೇಜು ವಿಭಾಗದಜೋಸ್ಟನ್ ಲೋಬೋ ಆಂಗ್ಲ ಭಾಷಾಉಪನ್ಯಾಸಕರು ಸ್ವಾಗತಿಸಿ, ಉಪನ್ಯಾಸಕ ಧನುಷ್ ವಂದಿಸಿದರು, ಪ್ರಾಥಮಿಕ ವಿಭಾಗದ ಸಹ ಶಿಕ್ಷಕಿಯರಾದ ದೀಕ್ಷಾ ಹಾಗೂ ಅರ್ಚನ ಕಾರ್ಯಕ್ರಮ ನಿರೂಪಿಸಿದರು.