ಉಡುಪಿ, ಜುಲೈ 4: ಉಡುಪಿ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿರುವ ಕುಶಲಕರ್ಮಿಗಳಿಗೆ ಜಿಲ್ಲಾ ಔದ್ಯಮಿಕ ಕೇಂದ್ರ/ ವೃತ್ತಿಪರ ಯೋಜನೆ/ ಗಿರಿಜನ ಉಪಯೋಜನೆಯಡಿ ವಿವಿಧ ಕಸುಬುಗಳಾದ ಗಾರೆ ಕೆಲಸ, ಮರಗೆಲಸ, ದೋಬಿ, ಕಮ್ಮಾರಿಕೆ, ಪ್ಲಂಬರ್, ಎಲೆಕ್ಟ್ರೀಷಿಯನ್ ಹಾಗೂ ಟೈಲರಿಂಗ್ ವೃತ್ತಿಯ ಉಪಕರಣಗಳನ್ನು ಉಚಿತವಾಗಿ ನೀಡಲಾಗುವುದು.
ಉಪಕರಣಗಳನ್ನು ಪಡೆಯಲಿಚ್ಛಿಸುವ ಗ್ರಾಮೀಣ ಪ್ರದೇಶದ ಅರ್ಜಿದಾರರು ಅರ್ಜಿ ನಮೂನೆಯನ್ನು ಆಯಾ ಗ್ರಾಮ ಪಂಚಾಯತ್‍ಗಳಲ್ಲಿ ಪಡೆದು, ಆಗಸ್ಟ್ 20 ರ ಒಳಗೆ ಉಪನಿರ್ದೇಶಕರು, ಗ್ರಾಮಾಂತರ ಕೈಗಾರಿಕೆ, ರಜತಾದ್ರಿ, ಮಣಿಪಾಲ ಈ ಕಚೇರಿಗೆ ಸಲ್ಲಿಸುವಂತೆ ಜಿಲ್ಲಾ ಪಂಚಾಯತ್, ಗ್ರಾಮಾಂತರ ಕೈಗಾರಿಕೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












