ಕುಂದಾಪುರ: ಇತ್ತೀಚೆಗೆ ವಿದ್ಯಾ ಅಕಾಡೆಮಿ ಮೂಡ್ಲಕಟ್ಟೆಯಲ್ಲಿ ಶಾಲಾ ವಾರ್ಷಿಕೋತ್ಸವನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಡಾ.ಪ್ರೇಮಾನಂದ ಕೆ. ತಾಲೂಕು ಹೆಲ್ತ್ ಆಫೀಸರ್ ಕುಂದಾಪುರ ಇವರು ಆಗಮಿಸಿದ್ದರು. ಹಾಗೆಯೇ ವೇದಿಕೆಯಲ್ಲಿ ಡಾ॥ ರಾಮಕೃಷ್ಣ ಹೆಗ್ಡೆ, ಬ್ರಾಂಡ್ ಬಿಲ್ಡಿಂಗ್ ಡೈರೆಕ್ಟರ್, ಹಾಗೂ ಪ್ರೊ. ಜೆನ್ನಿಫರ್ ಫ್ರೀಡಾ ಮೆನೇಜಸ್, ಪ್ರಿನ್ಸಿಪಲ್ ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್ ,ಡಾ. ಪ್ರತಿಭಾ ಪಾಟೀಲ್ ಪ್ರಿನ್ಸಿಪಾಲ್ ಆಫ್ ಐ ಎಂ ಜೆ ಇನ್ಸ್ಟಿಟ್ಯೂಷನ್, ಸೆಬಾಸ್ಟಿನ್, ಅಕಾಡೆಮಿಸಿನ್ ಇವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳು ಮಾತನಾಡಿ ಇಂದಿನ ಮಕ್ಕಳ ಜೀವನದಲ್ಲಿ ಹೊರಾಂಗಣ ಆಟಗಳ ಅಗತ್ಯತೆ ಅತ್ಯಂತ ಮಹತ್ವದ್ದು ಎಂದು ಒತ್ತಿ ಹೇಳಿದರು. ಹಾಗೆಯೇ ಆಹಾರ ಕ್ರಮದ ಕುರಿತು ಪೋಷಕರಿಗೆ ಮೌಲ್ಯಯುತ ಮಾಹಿತಿ ನೀಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಅತಿಥಿಗಳು ಹಿತನುಡಿಯನ್ನಾಡಿದರು. ನಂತರ ಎಲ್ಲಾ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನೃತ್ಯ, ನಾಟಕ, ಯಕ್ಷಗಾನದ ಮೂಲಕ ಕಣ್ಮನ ಸೆಳೆದರು. ಕಾರ್ಯಕ್ರಮದಲ್ಲಿ ಶಿಕ್ಷಕಿ ರಶ್ಮಾ ಶೆಟ್ಟಿ ವಾರ್ಷಿಕ ವರದಿ ಓದಿದರು, ಸೋಫಿಯಾ ಕಾರ್ವಾಲ್ಲೊ ಕಾರ್ಯಕ್ರಮದ ನಿರೂಪಣೆ ಮಾಡಿದರು. ಶಿಕ್ಷಕಿ ವಿದ್ಯಾ ಅತಿಥಿ ಪರಿಚಯ ಮಾಡಿದರು. ಸುನಿತಾ ರೆಬೆಲ್ಲೊ ಸ್ವಾಗತ ಭಾಷಣ ಮಾಡಿದರು. ಶಿಕ್ಷಕಿಯರಾದ ಪದ್ಮಾವತಿ ಮತ್ತು ಪ್ರಜ್ಞಾ ಶೆಟ್ಟಿ ಬಹುಮಾನ ವಿಜೇತರ ಪಟ್ಟಿಯನ್ನು ವಿವರಿಸಿದರು. ಶಿಕ್ಷಕಿ ಸ್ವಾತಿ ವಂದಿಸಿದರು.
















