ಕುಂದಾಪುರ:ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ಸಿ ಎ / ಸಿ ಎಸ್ ಮಾಹಿತಿ ಕಾರ್ಯಾಗಾರ.

ಕುಂದಾಪುರ : ಜೂನ್ 2 ರಂದು ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗಾಗಿ ಸಿ ಎ / ಸಿ ಎಸ್ ಮಾಹಿತಿ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿತ್ತು.

ವಿದ್ಯಾರ್ಥಿಗಳಿಗೆ ಚಾರ್ಟರ್ಡ್ ಅಕೌಂಟೆಂಟ್ ಎಂದರೇನು?, ಸಿಎ / ಸಿಎಸ್ ಪಠ್ಯ ಕ್ರಮ, ಶೈಕ್ಷಣಿಕ ಅರ್ಹತೆ, ವಿವಿಧ ಹಂತಗಳ ಬಗ್ಗೆ ಹಾಗೆಯೇ ಸಿ ಎ ಎನ್ನುವುದು ಕಠಿಣವಲ್ಲ, ಅದನ್ನು ಸವಾಲಾಗಿ ಸ್ವೀಕರಿಸಿದರೆ ಮೊದಲ ಪ್ರಯತ್ನದಲ್ಲಿಯೇ ಯಶಸ್ಸು ಸಾಧಿಸಬಹುದು ಎಂದು prof Alban Antony pereira ಸಂಪೂರ್ಣವಾಗಿ ಮಾಹಿತಿ ನೀಡಿದರು.

ಸಂಸ್ಥೆಯ ಕಾರ್ಯದರ್ಶಿ ಶ್ರೀ. ಕೆ. ರಾಧಾಕೃಷ್ಣ ಶೆಣೈ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಸಂದೀಪ್ ಗಾಣಿಗ, ಉಪ ಪ್ರಾಂಶುಪಾಲರಾದ ಸುಜಯ್ ಕೋಟೆಗಾರ್, ಅರ್ಥ ಶಾಸ್ತ್ರ ವಿಭಾಗ ದ ಮುಖ್ಯಸ್ಥರಾದ ಲತಾ ಪೈ ಉಪಸ್ಥಿತರಿದ್ದರು.

ಅರ್ಥಶಾಸ್ತ್ರ ಉಪನ್ಯಾಸಕಿ ಶಿವ ರಂಜನಿ ವಂದಿಸಿ, ವಾಣಿಜ್ಯ ಶಾಸ್ತ್ರ ಉಪನ್ಯಾಸಕ ನಾಗೇಶ್ ಸ್ವಾಗತಿಸಿ, ಸಂಖ್ಯಾ ಶಾಸ್ತ್ರ ಉಪನ್ಯಾಸಕಿ ವಿದ್ಯಾಶ್ರೀ ಅತಿಥಿ ಯನ್ನು ಪರಿಚಯಿಸಿದರು, ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ನಿಧಿ ಕಾರ್ಯಕ್ರಮ ನಿರೂಪಿಸಿದರು.