ಕುಂದಾಪುರ: ಶ್ರೀ ವೆಂಕಟರಮಣ ಕಾಲೇಜಿಗೆ ರಾಜ್ಯ ಮಟ್ಟದ 4 ನೇ rank. ರಾಜ್ಯ ಮಟ್ಟದ ಮೊದಲ ಹತ್ತು ರ್ಯಾಂಕ್ ಗಳಲ್ಲಿ ಒಟ್ಟು16 ರ್ಯಾಂಕ್ ಗಳನ್ನು ಪಡೆದ ಕಾಲೇಜು.

ಕುಂದಾಪುರ : ದ್ವಿತೀಯ ಪಿಯುಸಿ ಪರೀಕ್ಷೆ 2 ರ ನಂತರ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಹರಿಕೃಪಾ M S 597 ಅಂಕ ದಾಖಲಿಸುವ ಮೂಲಕ ರಾಜ್ಯಕ್ಕೆ 4 ನೇ ಸ್ಥಾನಿಯಾಗಿ, ಉಡುಪಿ ಜಿಲ್ಲೆಗೆ ಮೊದಲ ಟಾಪರ್ ಆಗಿ ಅನುಪಮ ಸಾಧನೆ ಮೆರೆದಿದ್ದಾಳೆ.

H. G ವೈಷ್ಣವಿ ಅರಸ್ (596) 5 ನೇ ರ್ಯಾಂಕ್, ರಂಜಿತಾ ,ಸುಮಿತ್ರಾ ಭಟ್ (595) 6 ನೇ ರ್ಯಾಂಕ್, ಅಮೂಲ್ಯ C ಶೆಟ್ಟಿ (594) 7 ನೇ ರ್ಯಾಂಕ್, ದೀಕ್ಷಿತಾ (593)8 ನೇ ರ್ಯಾಂಕ್, ಸಂಜನಾ ಪ್ರಕಾಶ್, ಸನ್ನಿಧಿ M (592) 9 ನೇ ರ್ಯಾಂಕ್, ಕೀರ್ತನಾ, ಅನನ್ಯ (591)10 ನೇ ರ್ಯಾಂಕ್ ಪಡೆದುಕೊಂಡಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಸಿಂಚನಾ C ಪೂಜಾರಿ (595)5 ನೇ ರ್ಯಾಂಕ್, V ದಿವೀಸ್ ಶೆಣೈ (593) 7 ನೇ ರ್ಯಾಂಕ್, ಬಿಬಿನ್ ಬಿಜೋಯ್ (591) 9 ನೇ ರ್ಯಾಂಕ್, ಇಂಚರ, C ಜ್ಞಾನಿಕಾ ಶೆಟ್ಟಿ, ಪ್ರಣವಿ ಉಳ್ಳೂರ್ (590) 10 ನೇ ರ್ಯಾಂಕ್ ಪಡೆದು ಕೊಂಡಿದ್ದಾರೆ.

ಪ್ರತಿ ಬಾರಿಯು ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಕಾಲೇಜು ಶೇ 100 ಫಲಿತಾಂಶ ದಾಖಲಿಸುತ್ತಿರುವುದು ಕಾಲೇಜಿನ ಹಿರಿಮೆಗೆ ಸಾಕ್ಷಿಯಾಗಿದೆ.ಸಾಧಕ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ – ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.