ಕುಂದಾಪುರ: ವಸತಿ ನಿಲಯ, ಆಶ್ರಮ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ

ಉಡುಪಿ, ಮೇ 22: ಕುಂದಾಪುರ ತಾಲೂಕಿನಲ್ಲಿ ನಡೆಯುತ್ತಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ಬಾಲಕ / ಬಾಲಕಿಯರ ವಸತಿ ನಿಲಯಗಳಲ್ಲಿ ಹಾಗೂ ಆಶ್ರಮ ಶಾಲೆಗಳಲ್ಲಿ 2019-20 ನೇ ಸಾಲಿನಲ್ಲಿ ಖಾಲಿ ಇರುವ ಸ್ಥಳಗಳಿಗೆ ಅರ್ಹ ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗ / ಇತರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಂದ ವಸತಿ ನಿಲಯ ಪ್ರವೇಶಕ್ಕೆ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಪ್ರವೇಶ ಬಯಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ www.sw.kar.nic.in (ಪ.ಜಾತಿ ವಸತಿ ನಿಲಯಗಳಿಗೆ), www.tw.kar.nic.in (ಪ.ಪಂಗಡ ವಸತಿ ನಿಲಯಗಳಿಗೆ), ಹಾಗೂ  http://admissions.kar.nic.in/ hosteladmission ಪೋರ್ಟಲ್ ಮೂಲಕ ಆನ್‍ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸುವುದು ಹಾಗೂ ಸಲ್ಲಿಸಿದ ಅರ್ಜಿಯನ್ನು ಪ್ರಿಂಟ್ ತೆಗೆದು ವಿದ್ಯಾರ್ಥಿಗಳ ಜಾತಿ ಪ್ರಮಾಣ ಪತ್ರ (ಝರಾಕ್ಸ್ ಪ್ರತಿ), ವಿದ್ಯಾರ್ಥಿಗಳ ಆಧಾರ್ ಕಾರ್ಡ್ (ಝರಾಕ್ಸ್ ಪ್ರತಿ), ವಿದ್ಯಾರ್ಥಿಗಳ ಬ್ಯಾಂಕ್ ಪಾಸ್ ಪುಸ್ತಕ (ಝರಾಕ್ಸ್ ಪ್ರತಿ), 2 ಪಾಸ್‍ಪೋರ್ಟ್ ಅಳತೆಯ ಭಾವಚಿತ್ರ, ವಿದ್ಯಾರ್ಥಿಗಳ ಹಿಂದಿನ ತರಗತಿಯ ಅಂಕಪಟ್ಟಿ ಪ್ರತಿ (ಝರಾಕ್ಸ್ ಪ್ರತಿ), ವಿದ್ಯಾರ್ಥಿಗಳ / ಪಾಲಕರ ಮೊಬೈಲ್ ನಂಬರ್, ಆದಾಯ ಪ್ರಮಾಣ ಪತ್ರ (ಝರಾಕ್ಸ್ ಪ್ರತಿ), ವಿದ್ಯಾರ್ಥಿಗಳ ಸ್ಟೂಡೆಂಟ್ ಅಚೀವ್‍ಮೆಂಟ್ ಟ್ರ್ಯಾಕಿಂಗ್ ಸಿಸ್ಟಮ್ ಸಂಖ್ಯೆ (ಎಸ್‍ಎಟಿಎಸ್ ಸಂಖ್ಯೆಯನ್ನು ಸಂಬಂಧಿಸಿದ ಶಾಲಾ ಮುಖ್ಯೋಪಾಧ್ಯಾಯರಿಂದ ಪಡೆದು ಅರ್ಜಿಯಲ್ಲಿ ನಮೂದಿಸಬೇಕು) ಈ ದಾಖಲೆಗಳನ್ನು ಲಗತ್ತಿಸಿ ಸಂಬಂಧಿಸಿದ ಮುಖ್ಯೋಪಾಧ್ಯಾಯರಿಂದ / ಪ್ರಾಂಶುಪಾಲರಿಂದ ದೃಢೀಕರಿಸಿ ಈ ಕಾರ್ಯಾಲಯಕ್ಕೆ ಅಥವಾ ಸಂಬಂಧಿಸಿದ ವಸತಿ ನಿಲಯಗಳ ವಾರ್ಡನ್ / ಆಶ್ರಮಶಾಲೆ ಮುಖ್ಯೋಪಾಧ್ಯಾಯರುಗಳಿಗೆ ಸಲ್ಲಿಸಬೇಕು.

ಮೆಟ್ರಿಕ್ ಪೂರ್ವ / ನಂತರದ ವಸತಿ ನಿಲಯಗಳ/ ಆಶ್ರಮ ಶಾಲೆಗಳ ವಿವರ:

ಸರಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಕುಂದಾಪುರ, ಸರಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ ಕುಂದಾಪುರ, ಸರಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಬೈಂದೂರು, ಸರಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಅಂಪಾರು, ಸರಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಶಂಕರನಾರಾಯಣ (ಪ.ಪಂಗಡ) ಇಲ್ಲಿಗೆ ಪ್ರವೇಶ ಪಡೆಯುವ 5 ನೇ ತರಗತಿಯಿಂದ 10 ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳು ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬೇಕು.

ಸರಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಕುಂದಾಪುರ, ಸರಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಕುಂದಾಪುರ, ಸರಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಕುಂದಾಪುರ (ಪ.ಪಂಗಡ), ಸರಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಬೈಂದೂರು (ಪ.ಪಂಗಡ) ಇಲ್ಲಿಗೆ ಪ್ರವೇಶ ಬಯಸುವ ಪ್ರಥಮ ಪಿ.ಯು.ಸಿ/ ಡಿಪ್ಲೋಮಾ/ ಐ.ಟಿ.ಐ ಯಿಂದ ಅಂತಿಮ ಪದವಿ ತರಗತಿಯಲ್ಲಿ (ಕೋರ್ಸಿನಲ್ಲಿ) ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಸರಕಾರಿ ಆಶ್ರಮ ಶಾಲೆ ಕುಂದಾಪುರ (ಪ.ಪಂಗಡ), ಸರಕಾರಿ ಆಶ್ರಮ ಶಾಲೆ ಬೈಂದೂರು (ಪ.ಪಂಗಡ) ಇಲ್ಲಿಗೆ ಪ್ರವೇಶ ಬಯಸುವ 1 ರಿಂದ 5ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮ್ಯಾನ್ಯುವಲ್ ಅರ್ಜಿ ಸಲ್ಲಿಸಬಹುದಾಗಿದೆ. ಇಲ್ಲಿಯ ಪ್ರವೇಶಾತಿ ಅರ್ಜಿಗಳು ಕಚೇರಿಯಲ್ಲಿ ಅಥವಾ ಸಂಬಂಧಪಟ್ಟ ಶಾಲೆಯಲ್ಲಿ ಲಭ್ಯವಿರುತ್ತದೆ. ಸದರಿ ಶಾಲೆಗಳಿಗೆ ಅರ್ಜಿಯನ್ನು ಆನ್‍ಲೈನ್ ಮೂಲಕ ಸಲ್ಲಿಸುವಂತಿಲ್ಲ.

ಆದಾಯ ಮಿತಿ:

ಪ.ಜಾತಿ/ ಪ.ವರ್ಗದ 1 ರಿಂದ 5 ಹಾಗೂ 5 ರಿಂದ 8 ನೇ ತರಗತಿಯವರೆಗಿನ ವಿದ್ಯಾರ್ಥಿಗಳ ಪೋಷಕರ ಆದಾಯ ಮಿತಿ 6 ಲಕ್ಷ ರೂ., ಪ.ಜಾತಿ/ ಪ.ವರ್ಗದ 9 ರಿಂದ 10 ನೇ ತರಗತಿಯ ವಿದ್ಯಾಥಿಗಳ ಪೋಷಕರ ಆದಾಯ ಮಿತಿ 2.50 ಲಕ್ಷ ರೂ. ಪ್ರವರ್ಗ 1 ರ 5 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳ ಪೋಷಕರ ಆದಾಯ ಮಿತಿ 1 ಲಕ್ಷ ರೂ., ಪ್ರವರ್ಗ-2ಎ/2ಬಿ/3ಎ/3ಬಿ ಯ 5 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳ ಪೋಷಕರ ಆದಾಯ ಮಿತಿ 44500 ರೂ., ಪ.ಜಾತಿ/ ಪ.ವರ್ಗದ ಪಿ.ಯು.ಸಿ ಮೇಲ್ಪಟ್ಟ ವಿದ್ಯಾರ್ಥಿಗಳ ಪೋಷಕರ ಆದಾಯದ ಮಿತಿ 2.50 ಲಕ್ಷ ರೂ.ಗಳು.

ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳನ್ನು ಸೀಟುಗಳ ಲಭ್ಯತೆಯನುಸಾರ ಪ್ರವೇಶ ಒದಗಿಸಲಾಗುವುದು. ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯ ಹಾಗೂ ಆಶ್ರಮ ಶಾಲೆಯ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನ ಜೂನ್ 15. ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಜೂನ್ 25 ಕೊನೆಯ ದಿನವಾಗಿರುತ್ತದೆ.

ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು (ಗ್ರೇಡ್-2), ಸಮಾಜ ಕಲ್ಯಾಣ ಇಲಾಖೆ, ಕುಂದಾಪುರ ಹಾಗೂ ದೂರವಾಣಿ ಸಂಖ್ಯೆ: 08254-234609/ 9480843005 ಅನ್ನು ಸಂಪರ್ಕಿಸುವಂತೆ ಕುಂದಾಪುರ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.