ಕುಂದಾಪುರ : ದಿನವಿಡೀ ಸುರಿದ ಭಾರೀ ಮಳೆಗೆ ಪುರಾಣ ಪ್ರಸಿದ್ದ ಕಮಲಶಿಲೆಯ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದೊಳಗೆ ನೀರು ಪ್ರವೇಶಿಸಿ ದೇವಿಯ ಮೂರ್ತಿಯನ್ನು ತೋಯಿಸಿದೆ.
ಸೋಮವಾರ ಕುಬ್ಜಾ ನದಿ ದೇವಸ್ಥಾನ ಪ್ರವೇಶ ಮಾಡಿದ್ದು, ಮಂಗಳವಾರ ಸಂಜೆ ದೇವಸ್ಥಾನದ ಗರ್ಭಗುಡಿ ಪ್ರವೇಶಿಸಿದ ಕುಬ್ಜೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವರ ಪಾದ ತೊಳೆದಿದ್ದಾಳೆ.
ನೀರು ಆಗಮನದ ಬಳಿಕ ದೇವಸ್ಥಾನದ ಅರ್ಚಕರು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಪ್ರತೀ ವರ್ಷ ಕುಬ್ಜಾ ನದಿ ದೇವಸ್ಥಾನ ಪ್ರವೇಶಿಸಿ ದೇವಿಯ ಪಾದ ತೊಳೆಯುತ್ತಾಳೆ ಎನ್ನುವುದು ವಾಡಿಕೆ. ಸಂಜೆ ದೇವಸ್ಥಾನದೊಳಗೆ ನೀರು ಪ್ರವೇಶಿಸಿದ್ದರಿಂದ ಭಕ್ತಾಧಿಗಳು ವಿಶೇಷ ದೇವರ ದರ್ಶನ ಪಡೆದರು.