ಕುಂದಾಪುರ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಆಗಸ್ಟ್ 10 ರಂದು ಕುಂದಾಪ್ರ ಸಿರಿ ವೈಭೋಗ ಕಾರ್ಯಕ್ರಮ

ಕುಂದಾಪುರ: ಭಂಡಾರ್ ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು ಕುಂದಾಪುರ ಪ್ರಸ್ತುತ ಪಡಿಸುತ್ತಿದೆ ಗ್ರಂಥಾಲಯ ಕುಟಿ ವೈಭವಂ ಪುಸ್ತಕದ ಸೂರಿನಡಿಯಲ್ಲಿ ‘ಕುಂದಾಪ್ರ ಸಿರಿ ವೈಭೋಗ’ವು ಆಗಸ್ಟ್ 10 ರಂದು ಬೆಳಿಗ್ಗೆ 10 ಗಂಟೆಗೆ ಕಾಲೇಜು ಗ್ರಂಥಾಲಯದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಕುಂದಾಪುರದ ಆಚಾರ-ವಿಚಾರ-ಆಹಾರಕ್ಕೆ ಸಂಬಂಧಪಟ್ಟ ಪ್ರದರ್ಶನಗಳನ್ನು ಏರ್ಪಡಿಸಲಾಗುವುದು. ಸೂರಿನಡಿಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿರುವುದು. ಕಾಲೇಜಿನ ಇಂಗ್ಲಿಷ್, ಪತ್ರಿಕೋದ್ಯಮ ಮತ್ತು ಮನಶಾಸ್ತ್ರ ವಿದ್ಯಾರ್ಥಿಗಳು ನಡೆಸಿಕೊಡುವ ಈ ಕಾರ್ಯಕ್ರಮದ ನೇತೃತ್ವವನ್ನು ಪತ್ರಿಕೋದ್ಯಮ ವಿಭಾಗದ ಸುಮಲತಾ ಇವರು ವಹಿಸಲಿದ್ದಾರೆ.