ಕುಂದಾಪುರ: ಇಲ್ಲಿನ ಕುಂದೇಶ್ವರ ರಸ್ತೆಯ ಉತ್ತಮ ಕ್ಲಿನಿಕ್ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷ ಪ್ರಭಾ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಶನ್ (ಸ್ಪೇಸ್) ಸಂಸ್ಥೆಯು ಸಿ.ಎ, ಸಿ.ಎಸ್., ಕೋರ್ಸುಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದರಲ್ಲಿ ಮುಂಚೂಣಿಯಲ್ಲಿದ್ದು, ಲಾಕ್ ಡೌನ್ ಸಂದರ್ಭದಲ್ಲಿ ಸಿ.ಎ., ಸಿ.ಎಸ್., ಕೋರ್ಸುಗಳ ಸಂಪೂರ್ಣ ಮಾಹಿತಿಯನ್ನು ಕಾರ್ಯಗಾರದಲ್ಲಿ ನೀಡಲು ಉದ್ದೇಶಿಸಿದೆ.
ಈಗಾಗಲೇ ಸಿ.ಎ. ಇಂಟರ್ಮೀಡಿಯೇಟ್ ಮತ್ತು ಸಿ.ಎಸ್. ವಿದ್ಯಾರ್ಥಿಗಳಿಗೆ ಆನ್ ಲೈನ್ ತರಬೇತಿ ಆರಂಭಿಸಿ ವಿದ್ಯಾರ್ಥಿಗಳಿಗೆ ದೈನಂದಿನ ತರಗತಿಯನ್ನು ನಡೆಸುತ್ತಿದೆ.
ದ್ವಿತೀಯ ಪಿಯುಸಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಸಿ.ಎ., ಸಿ.ಎಸ್. ಕೋರ್ಸ್ ಗಳಿಗೆ ಯಾವ ರೀತಿಯಲ್ಲಿ ತಯಾರಿ ನಡೆಸಬೇಕು. ಸಿ.ಎ., ಸಿ.ಎಸ್., ಕೋರ್ಸುಗಳ ಸಂಪೂರ್ಣ ಮಾಹಿತಿಯನ್ನು ಕೂಡ ಕಾರ್ಯಗಾರದಲ್ಲಿ ನೀಡಲಾಗುತ್ತದೆ.
ಲಾಕ್ ಡೌನ್ ನಿಂದ ವಿದ್ಯಾರ್ಥಿಗಳ ಸಮಯ ವ್ಯರ್ಥ ವಾಗಿದ್ದು, ಮುಂದಿನ ದಿನಗಳ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆಯಲು ಬೇಕಾದ ಮಾರ್ಗದರ್ಶನವನ್ನು ನೀಡುವುದರ ಜೊತೆಗೆ ಅನುಭವಿ ಮಾರ್ಗದರ್ಶಕರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಆನ್ ಲೈನ್ ಶಿಕ್ಷಣ ನೀಡಲು ಸಂಸ್ಥೆ ಸಿದ್ದ:
ಮುಂದಿನ ದಿನಗಳಲ್ಲಿ ಸಿ.ಎ. ಫೌಂಡೇಶನ್ ಮತ್ತು ಸಿ.ಎಸ್. ಇ.ಇ.ಟಿ ಪರೀಕ್ಷೆಗೆ ಆನ್ ಲೈನ್ ನಲ್ಲಿ ತರಬೇತಿ ಆರಂಭವಾಗಲಿದ್ದು, ಈ ಆನ್ ಲೈನ್ ತರಬೇತಿಯಲ್ಲಿ ತರಬೇತುದಾರರು ವಿದ್ಯಾರ್ಥಿಗಳೊಂದಿಗೆ
ನೇರ ಸಂಪರ್ಕದಲ್ಲಿ ತರಬೇತಿ ನೀಡಿ ಪೂರ್ವತಯಾರಿ ಪರೀಕ್ಷೆಯನ್ನು ನಡೆಸುತ್ತಾರೆ. ಕಲಿಕಾ ಸಾಮಗ್ರಿಗಳನ್ನು ಕೂಡ ಆನ್ ಲೈನ್ ನಲ್ಲಿ ಒದಗಿಸಲಾಗುತ್ತದೆ. ವಿದ್ಯಾರ್ಥಿಗಳ ಸಂದೇಹ ಪರಿಹಾರಕ್ಕಾಗಿ ಪ್ರತ್ಯೇಕ ಸಮಯವನ್ನು ನಿಗದಿಪಡಿಸಲಾಗುವುದು ಆನ್ ಲೈನ್ ಶಿಕ್ಷಣವನ್ನು ಪೂರ್ಣ ಪ್ರಮಾಣದಲ್ಲಿ ನಡೆಸಲು ಸಂಸ್ಥೆ ಈಗಾಗಲೇ ಬೇಕಾಗಿರುವ ಎಲ್ಲ ಸಿದ್ಧತೆಯನ್ನು ಮಾಡಿಕೊಂಡಿದೆ.
ಆಸಕ್ತ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆಯಲು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಸಂಸ್ಥೆಯನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಮುಖ್ಯಸ್ಥರಾದ ಭರತ್ ಶೆಟ್ಟಿ ಮತ್ತು ಪ್ರತಾಪಚಂದ್ರ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ,www.shikshaprabha.com ಗೆ ಲಾಗ್ ಆನ್ ಮಾಡಬಹುದು.