ಕುಂದಾಪುರ: ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆ: ಧರಣಿ ಸತ್ಯಾಗ್ರಹದ ಪೂರ್ವಭಾವಿ ಸಭೆ

ಕುಂದಾಪುರ: ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆ, ಶಾಸ್ತ್ರಿ ಸರ್ಕಲ್ ಮೇಲ್ಸೇತುವೆÀ ನಿರ್ಮಾಣ ವಿಳಂಬ, ಫಾಸ್ಟ್‍ಟ್ಯಾಗ್ ಕಡ್ಡಾಯಗೊಳಿಸುವುದು ಸೇರಿದಂತೆ ಇನ್ನಿತರ ಸಮಸ್ಯೆಗಳ ಕುರಿತು ಡಿಸೆಂಬರ್ ನಲ್ಲಿ ನಡೆಸಲುದ್ದೇಶಿಸಿರುವ ಧರಣಿ ಸತ್ಯಾಗ್ರಹದ ಪೂರ್ವಭಾವಿ ಸಭೆ ಕರೆಯಲಾಗಿದೆ  ನವೆಂಬರ್ 29ರ ಶುಕ್ರವಾರ ಸಂಜೆ 5 ಗಂಟೆಗೆ ಕುಂದಾಪುರದ ಬೋರ್ಡ್‍ಹೈಸ್ಕೂಲಿನ ಕಲಾಮಂದಿರದಲ್ಲಿ ಕುಂದಾಪುರ ಮತ್ತು ಆಸುಪಾಸಿನ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಜೊತೆ ಸಭೆ ನಡೆಸಲಾಗುವುದು.

ಸಭೆಯಲ್ಲಿ ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಜೆ.ಸಿ, ಯುವಕ, ಯುವತಿ ಮಂಡಲಗಳು, ರಿಕ್ಷಾ ಚಾಲಕ- ಮಾಲಕÀರು, ಟ್ಯಾಕ್ಸಿ ಚಾಲಕರು-ಮಾಲಕರು, ಇತರೆ ಖಾಸಗಿ ವಾಹನ ಸವಾರರು, ಸಾರ್ವಜನಿಕ ಸೇವೆಯಲ್ಲಿರುವ ಲಘು ಮತ್ತು ಘನ ವಾಹನಗಳ ಚಾಲಕರು-ಮಾಲಕರು, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ಧಾರ್ಮಿಕ ಸಮಿತಿ ಸದಸ್ಯರು, ವ್ಯಾಪಾರಸ್ಥರು, ಹಿರಿಯ ನಾಗರಿಕರು, ಊರಿನ ಜವಾಬ್ದಾರಿಯುತ ನಾಗರಿಕರು, ಉದ್ಯಮಿಗಳು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಇನ್ನಿತರರು ಭಾಗವಹಿಸುವಂತೆ ಕೋರಲಾಗಿದೆ. ಅಲ್ಲದೇ ಧರಣಿಗೆ ಸಂಬಂಧಿಸಿದಂತೆ ಚರ್ಚಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡುವಂತೆ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಸಂಚಾಲಕ ಸೋಮಶೇಖರ ಶೆಟ್ಟಿ ಕೆಂಚನೂರು ಹಾಗೂ ಹೋರಾಟದ ಮುಂದಾಳು ಕಿಶೋರ್ ಕುಮಾರ್ ಕುಂದಾಪುರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.