ಪಂಚಗಂಗಾ ರೈತರ ಸೇವಾ ಸಹಕಾರಿ ಸಂಘ:ಸಭೆ

ಕುಂದಾಪುರ: ಸಂಘದ ಸಿಬ್ಬಂದಿಗಳಿಗೆ ಆಡಳಿತ ಮಂಡಳಿಯು ಸಂಪೂರ್ಣ ಸಹಕಾರ ಕೊಟ್ಟರೆ ಆ ಸಂಸ್ಥೆಯು ಉತ್ತಮ ಪ್ರಗತಿಯತ್ತ ನಡೆಯುವುದರಲ್ಲಿ ಸಂಶಯವೇ ಇಲ್ಲ ಎಂದು ಪಂಚಗಂಗಾ ರೈತ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಾಜು ದೇವಾಡಿಗ ಹೇಳಿದರು.

ಅವರು ಪಂಚಗಂಗಾ ರೈತರ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಬುಧವಾರ ನಡೆದ ೨೦೧೮-೧೯ನೇ ಸಾಲಿನ ಪ್ರಗತಿ ಮಹಿಳಾ ವಿವಿದೋದ್ದೇಶ ಸಹಕಾರಿ ಸಂಘದ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮುಖ್ಯಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಸಂಘದ ನಿರ್ದೇಶಕಿ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯೆ ಶೋಭಾ ಜಿ ಪುತ್ರನ್,  ಸಂಘದ ಅಧ್ಯಕ್ಷೆ ಸಾಧು ಎಸ್ ಬಿಲ್ಲವ ಮಾತನಾಡಿದರು.

ಇದೇ ವೇಳೆಯಲ್ಲಿ ಸಂಘದ ಸದಸ್ಯರ ಮನೆಯ ೧೦ನೇ ತರಗತಿ ಮತ್ತು ೧೨ನೇ ತರಗತಿಯಲ್ಲಿ ಶೇ.೮೦ ಕ್ಕಿಂತ ಹೆಚ್ಚು ಅಂಕ ಗಳಿಸಿದ ಮಕ್ಕಳಿಗೆ ಸಂಘದ ವತಿಯಿಂದ ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಯಿತು.

ಸಂಘದ ಉಪಾಧ್ಯಕ್ಷೆ ಅನ್ನಪೂರ್ಣ, ನಿರ್ದೇಶಕರಾದ ಕುಸುಮ ಆರ್ ಮೊಗವೀರ, ಜಯಲಕ್ಷ್ಮೀ ಎಸ್ ರಾವ್, ಪದ್ಮಾವತಿ ಶೆಟ್ಟಿ, ಜೀತಾ ಕ್ರಾಸ್ತಾ, ಆಸಿಯಾಭಾನು, ಲೀಲಾವತಿ ಗಾಣಿಗ, ಶಾರದ, ಪ್ರತಿಮಾ ವರ್ಗೀಸ್, ನೇತ್ರಾವತಿ, ಭಾರತಿ, ಗೀತಾ ಡಿ.ಹೆಚ್ ಮತ್ತು ಶ್ರೀ ಸಾಯಿ ಮಹಿಳಾ ಆರ್ಥಿಕ ಸೇವಾ ಸಹಕಾರಿ ಸಂಘದ ಪ್ರಧಾನ ವ್ಯವಸ್ಥಾಪಕರಾದ ಭಾಸ್ಕರ್ ಬಿಲ್ಲವ ಉಪಸ್ಥಿತರಿದ್ದರು.

ಸಂಘದ ಪ್ರಧಾನ ವ್ಯವಸ್ಥಾಪಕ ರಾಘವೇಂದ್ರ ಕುಲಾಲ್ ವರದಿ ವಾಚಿಸಿದರು. ಶ್ವೇತಾ ಜೋಗಿ ಪ್ರಾರ್ಥನೆಗೈದರು. ಸಿಬ್ಬಂದಿ ಶ್ರೀದೇವಿ ಸ್ವಾಗತಿಸಿ,  ವರದಾ ಧನ್ಯವಾದವಿತ್ತರು. ಶಿವರಾಮ್ ಕಾರ್ಯಕ್ರಮ ನಿರೂಪಿಸಿದರು.