ಕಾಮಗಾರಿ ವೇಳೆ ಭೂಮಿ ಕುಸಿತ:ಕೊಳವೆ ಬಾವಿಯೊಳಗೆ ಬಿದ್ದ ಕಾರ್ಮಿಕ

ಕುಂದಾಪುರ: ಕಾಮಗಾರಿ ವೇಳೆ ಭೂಮಿ ಕುಸಿದು ಕೊಳವೆಯೊಳಗೆ ಕಾರ್ಮಿಕ ಬಿದ್ದು ಡ ಘಟನೆ ಕುಂದಾಪುರ ತಾಲೂಕಿನ ಮರವಂತೆ ಎಂಬಲ್ಲಿ ನಡೆದಿದೆ. ಬೋರ್ ವೆಲ್ ಕೊಳೆಯೊಳಗೆ ಸಿಕ್ಕಿಹಾಕಿಕೊಂಡ  ವ್ಯಕ್ತಿ ಉಪ್ಪುಂದ ಫಿಶರೀಸ್ ಜನತಾ ಕಾಲೋನಿಯ ನಿವಾಸಿ ಸುಬ್ಬ ಖಾರ್ವಿ  ಪುತ್ರ ರೋಹಿತ್ ಖಾರ್ವಿ (35) ಯಾಗಿದ್ದಾರೆ.

ಬೈಂದೂರಿನ ಮರವಂತೆಯಲ್ಲಿ ಬ್ರೇಕ್ ವಾಟರ್ ಕಾಮಗಾರಿ ನಡೆಯುತ್ತಿದ್ದು, ಎನ್ ಎಸ್ ಕೆ ಸೈಟ್ ನಲ್ಲಿ ಹ್ಯಾಂಡ್ ಪಂಪ್ ಬಳಸಲು ಕೊಳವೆ ಬಾವಿ ನಿರ್ಮಿಸಲಾಗುತ್ತಿತ್ತು.  ಈ ಸಂದರ್ಭ ಮರವಂತೆಯಲ್ಲಿ ಬ್ರೇಕ್ ವಾಟರ್ ಕಾಮಗಾರಿಯಲ್ಲಿ ಕಾರ್ಮಿಕನಾಗಿದ್ದ ರೋಹಿತ್ ಖಾರ್ವಿ ಬೋರ್ ವೆಲ್ ಕೊರೆಯುವ ಸ್ಥಳಕ್ಕೆ ಬಂದ ಸಂದರ್ಭದಲ್ಲಿ ಕೊಳವೆ ಬಾವಿಯ ಸುತ್ತ ಕುಸಿದುಆಳದ ಕೊಳವೆ ಬಾವಿಯೊಳಗೆ ಬಿದ್ದಿದ್ದಾನೆ ಎನ್ನಲಾಗಿದೆ.

ತಕ್ಷಣ ಅಗ್ನಿಶಾಮಕದಳ, ವೈದ್ಯರು ಸ್ಥಳಕ್ಕೆ ಆಗಮಿಸಿದ್ದು, ರೋಹಿತ್ ಖಾರ್ವಿಯನ್ನು ಮೇಲೆತ್ತಿದ್ದಾರೆ.