ಕುಂದಾಪುರ : ಕೋವಿಡ್-19 ನಿಯಮ ಪಾಲಿಸದಿದ್ದರೆ ಕಟ್ಟುನಿಟ್ಟಿನ ಕ್ರಮ

ಉಡುಪಿ : ಕುಂದಾಪುರ ಪುರಸಭಾ  ವ್ಯಾಪ್ತಿಯಲ್ಲಿ ಕೋವಿಡ್ 19 ಸಾಂಕ್ರಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ದರಿಸುವುದು ,ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು,ಎಲ್ಲಂದರಲ್ಲಿ ಉಗುಳಬಾರದು ಮುಂತಾದ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸತಕ್ಕದ್ದು  ಇವುಗಳನ್ನು ಉಲ್ಲಂಘಿಸಿ ಸಾಂಕ್ರಮಿಕ ರೋಗ ಹರಡುವುದನ್ನು ಹೆಚ್ಚಿಗೆ ಮಾಡುವಂತಹ ನಡವಳಿಕೆಗಳನ್ನು  ಮಾಡುತ್ತಿರುವುದು ಕಂಡುಬಂದಲ್ಲಿ ರಾಷ್ಟ್ರೀಯ  ವಿಪತ್ತು ನಿರ್ವಹಣೆ ಕಾಯ್ದೆ 2005 ರ  ಹಾಗೂ ಕರ್ನಾಟಕ ಸರಕಾರದ ಸಾಂಕ್ರಮಿಕ ರೋಗ ಕೋವಿಡ್- 19 ರೆಗ್ಯೂಲೇಶನ್ 2020 ರ ಪ್ರಕಾರ ದಂಡವನ್ನು  ವಿಧಿಸುವ ಅವಕಾಶವಿರುತ್ತದೆ.

ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಲ್ಲಂದರಲ್ಲಿ ಉಗುಳುವುದನ್ನು ಮಾಡಬಾರದು , ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಈ ಮೂಲಕ ಕೋರಲಾಗಿದೆ. ಇವುಗಳನ್ನು ಉಲ್ಲಂಘಿಸುವುದು ಕಂಡುಬAದಲ್ಲಿ ಸಾರ್ವಜನಿಕರು ಇಂತಹ ಘಟನೆಗಳನ್ನು ಪುರಸಭೆಯ ಇ-ಮೇಲ್ ವಿಳಾಸ  [email protected],  ದೂರವಾಣಿ ಸಂಖ್ಯೆ : 08254-230410, ವಾಟ್ಯ್ಸಾಪ್ ಸಂಖ್ಯೆ : 9886429680 , 6360027331 ಅಥವಾ ಎಸ್.ಎಮ್.ಎಸ್ ಮುಖಾಂತರ ದೂರು ದಾಖಲಿಸಬಹುದಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಪುರಸಭೆಯೊಂದಿಗೆ ಸಹಕರಿಸಿ ಕೋವಿಡ್-19 ಹಬ್ಬುವುದನ್ನು ತಡೆಗಟ್ಟುಲು ಸಹಕರಿಸುವಂತೆ ಕೋರಿದೆ