ಕುಂದಾಪುರದ ಈ ಹೆಣ್ಣು ಮಗಳ ಚಿಕಿತ್ಸೆಗೆ ಬೇಕಿದೆ ನಿಮ್ಮ ನೆರವು: 

ಅರಳಿ ಬಾಳಿನಲ್ಲಿ ಬೆಳಗುತ್ತಲೇ ಇರಬೇಕಾದ ಕನಸೊಂದು ಆಸ್ಪತ್ರೆಯಲ್ಲಿ ನರಳುತ್ತಿದೆ. ಕೆಲವರ ಬದುಕೇ ಹಾಗೆ ಎಷ್ಟೇ ಪ್ರಾಮಾಣಿಕರಾಗಿದ್ದರೂ ಪರೋಪಕಾರಿಯಾಗಿ ಬಾಳಿದರೂ ಕೂಡ ವಿಧಿ ಎಂಬ ನಿಷ್ಕರುಣಿ ಆಟವಾಡುತ್ತಿರುತ್ತದೆ.

ಅಂದ ಹಾಗೆ ಈಕೆ ಅನುಷಾ ಶೆಟ್ಟಿ (ಪ್ರಾಯ 27) ಕುಂದಾಪುರ ತಾಲೂಕು ಹಾಲಾಡಿ ಗ್ರಾಮದ ಅಜಿತ್ ಶೆಟ್ಟಿ ಅವರ ಪತ್ನಿ ಹಾಗೂ ಒಂದೂವರೆ ವರ್ಷದ ಹೆಣ್ಣು ಮಗುವಿನ ತಾಯಿ. ಇವರು ದಿಢೀರ್ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾದಾಗ ಕಿಡ್ನಿ ಕ್ಯಾನ್ಸರ್ (ಕೊನೆಯ ಹಂತ) ಇದೆ ಎಂದು ಡಾಕ್ಟರ್ ದೃಢ ಪಡಿಸುತ್ತಾರೆ.

ಬೆಂಗಳೂರಿನಲ್ಲಿ ಒಂದು ಖಾಸಗಿ ಲ್ಯಾಬನಲ್ಲಿ ಡೆಂಟಲ್ ಟೆಕ್ನಿಷನ್ ಆಗಿ ಕಾರ್ಯನಿರ್ವಹಿಸುತ್ತಿರುವ ಗಂಡ ಅಜಿತ್ ಗೆ ಅಲ್ಲಿಯೇ ಅರ್ಧ ಉಸಿರು ನಿಂತ ಅನುಭವ, ಆದರೂ ಎದೆಗುಂದದ ಅಜಿತ್ ಬಂಧು ಬಳಗ ಕುಟುಂಬಿಕರೊಂದಿಗೆ ಸೇರಿ ಪತ್ನಿಯ ಚಿಕಿತ್ಸೆಗೆ ನಿಂತುಬಿಟ್ಟರು. ಈಗಾಗಲೆ 12ಲಕ್ಷಕ್ಕೂ ಹೆಚ್ಚು ವ್ಯಯ ವಾಗಿದೆ. ಮುಂದಿನ ಚಿಕಿತ್ಸೆಗಾಗಿ ವೈದ್ಯರ ಪ್ರಕಾರ 20ಲಕ್ಷ ಹಣದ ಅಗತ್ಯವಿದೆಯೆಂದು ಅಂದಾಜಿಸಿರುತ್ತಾರೆ. (Nivolumab 6 ಹಂತ, 10ಲಕ್ಷ ಇತರೆ 10ಲಕ್ಷ). “ನೀವು ಸಹಕರಿಸಿದರೆ ಅನುಷಾ ಬದುಕಿ ಬರಬಲ್ಲಳು ಈ ಜೀವಕ್ಕೆ ನೆರವಾಗಲು ಬಯಸುವವರು ಕೆಳಗೆ ನೀಡಿರುವ ಖಾತೆಗೆ ನೆರವು ನೀಡಿ

G Pay, PhonePe

8197978486 Ajith Shetty

Account Name

: AJITH SHETTY

Account Number : 0992500102109101

Account Type

IFSC Code

Branch

: SBA

: KARB0000099

: SRINAGAR, BENGALURU