ಕುಂದಾಪುರ: ಸತತ ಮಳೆಗೆ ಉಕ್ಕಿ ಹರಿದ ನದಿಗಳು -ಕಮಲಶಿಲೆ, ಮಾರಣಕಟ್ಟೆ ದೇವಸ್ಥಾನಗಳು ಜಲಾವೃತ

ಉಡುಪಿ: ಕಳೆದು ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಕುಂದಾಪುರ ತಾಲೂಕಿನ ಕಮಲಶಿಲೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಹಾಗೂ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಸುತ್ತ ನದಿ ನೀರು ಉಕ್ಕಿ ಹರಿಯುತ್ತಿದ್ದು ಜಲಾವೃತಗೊಂಡಿವೆ.

ಕುಬ್ಜಾ ನದಿ ಉಕ್ಕಿ ಹರಿಯುತ್ತಿದ್ದು ಪರಿಣಾಮ ನದಿ ನೀರು ಕಮಲಶಿಲೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಜಲಾವೃತಗೊಂಡಿದೆ.ಪ್ರತೀ ವರ್ಷ ಮಳೆಗಾಲದಲ್ಲಿ ಇಲ್ಲಿನ ದೇವಸ್ಥಾನ ಜಲಾವೃಗಳೊಳ್ಳುತ್ತದೆ.

ಇನ್ನು ಭಾರೀ ಮಳೆಯ ಪರಿಣಾಮ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಒಳಾಂಗಣಕ್ಕೆ ನೀರು ನುಗ್ಗಿದೆ.
ಈ ಭಾಗದಲ್ಲಿ ಬಿಟ್ಟೂ ಬಿಡದೆ ಮಳೆಯಾಗುತ್ತಿದ್ದು ತಗ್ಗು ಪ್ರದೇಶಗಳು ಜಲಾವೃತಗೊಂಡು ಜನಜೀವನ ಅಸ್ತವಸ್ತಗೊಂಡಿದೆ.ನದಿಗಳು ತುಂಬಿ ಹರಿಯುತ್ತಿದ್ದು ಸ್ಥಳೀಯರು ಹೊರಗೆ ಓಡಾಡದ ಪರಿಸ್ಥಿತಿ ನಿರ್ಮಾಣವಾಗಿದೆ.