udupixpress
Home Trending ಅಕ್ರಮ ಗೋ ಸಾಗಾಟ: ಇಬ್ಬರು ಆರೋಪಿಗಳ ಬಂಧನ

ಅಕ್ರಮ ಗೋ ಸಾಗಾಟ: ಇಬ್ಬರು ಆರೋಪಿಗಳ ಬಂಧನ

ಕುಂದಾಪುರ: ಇಲ್ಲಿನ ಕಾವ್ರಾಡಿ ಗ್ರಾಮದ ಜನತಾ ಕಾಲೋನಿ ಮಣ್ಣು ರಸ್ತೆಯಲ್ಲಿ ಬೊಲೆರೊ ವಾಹನದಲ್ಲಿ ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ವೇಳೆ ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರು ಇಂದು ಮುಂಜಾನೆ ದಾಳಿ ನಡೆಸಿ, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಓರ್ವ ತಪ್ಪಿಸಿಕೊಂಡು ಪರಾರಿಯಾಗಿದ್ದೇನೆ.
ಬಂಧಿತ ಆರೋಪಿಗಳನ್ನು ಮುತಾಯಬ್ ಹಾಗೂ ಕಂಡ್ಲೂರಿನ ರಿದಾನ್ ಎಂದು ಗುರುತಿಸಲಾಗಿದೆ. ಕಂಡ್ಲೂರಿನ ಸಮೀರ ಎಂಬಾತ ಪರಾರಿಯಾಗಿದ್ದಾನೆ.
ಧೂಪದಕಟ್ಟೆ ಕಡೆಯಿಂದ ಒಳರಸ್ತೆಯಲ್ಲಿ ದ್ವಿಚಕ್ರ ವಾಹನ ಹಾಗೂ ಅದನ್ನು ಹಿಂಬಾಲಿಸಿಕೊಂಡು ಬೊಲೆರೊ ವಾಹನ ವೇಗವಾಗಿ ಬಂದಿದ್ದು, ಪೊಲೀಸರು ಅಡ್ಡಹಾಕಿ ವಾಹನವನ್ನು ಪರಿಶೀಲಿಸಿದಾಗ ಹಿಂಬದಿ ಸೀಟ್‌ ನಲ್ಲಿ 3 ಗಂಡು ಕರುಗಳನ್ನು ಹಿಂಸಾತ್ಮಕವಾಗಿ ಕಟ್ಟಿಹಾಕಿ ಸಾಗಾಟ ಮಾಡುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
error: Content is protected !!