ಕುಂದಾಪುರ:ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ವಾರ್ಷಿಕ ಮಹಾಸಭೆ ಕುಂದಾಪುರ ವೇಣುಗೋಪಾಲಕೃಷ್ಣ ಹವಾನಿಯಂತ್ರಿತ ಸಭಾಭವನದಲ್ಲಿ ಸಂಘದ ಅಧ್ಯಕ್ಷ ಕೊಗ್ಗ ಗಾಣಿಗ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಗಾಣಿಗ ವರದಿ ವಾಚಿಸಿದರು. ಕೋಶಾಧಿಕಾರಿ ಪರಮೇಶ್ವರ ಲೆಕ್ಕಪತ್ರ ಮಂಡಿಸಿದರು.
ಇದೇ ಸಂದರ್ಭದಲ್ಲಿ ನೂತನ ಆಡಳಿತ ಮಂಡಳಿ ರಚಿಸಲಾಗಿದ್ದು,ನೂತನ ಅಧ್ಯಕ್ಷರಾಗಿ ಪ್ರಭಾಕರ ಬಿ.ಕುಂಭಾಶಿ ಆಯ್ಕೆಗೊಂಡರು.ಗೌರವಾಧ್ಯಕ್ಷರಾಗಿ ಉದ್ಯಮಿ ಕೆ.ಎಂ.ಲಕ್ಷ್ಮಣ, ಪ್ರಧಾನ ಕಾರ್ಯದರ್ಶಿಯಾಗಿ ಬಸ್ರೂರು ನಾಗರಾಜ ಗಾಣಿಗ, ಕೋಶಾಧಿಕಾರಿಯಾಗಿ ಹಿಲ್ಕೋಡು ನಾಗರಾಜ ಗಾಣಿಗ, ಉಪಾಧ್ಯಕ್ಷರಾಗಿ ರವಿ ಗಾಣಿಗ ಆಜ್ರಿ, ಪ್ರಮೋದ್ ಗಾಣಿಗ ಗಂಗೊಳ್ಳಿ, ಜತೆ ಕಾರ್ಯದರ್ಶಿಯಾಗಿ ಸುಬ್ರಹ್ಮಣ್ಯ ಜಿ.ಉಪ್ಪುಂದ, ರವಿ ಗಾಣಿಗ ಮಲ್ನಾರಿ, ಚಂದ್ರಶೇಖರ ಬೀಜಾಡಿ, ತಿಮ್ಮಪ್ಪ ಗಾಣಿಗ ತಗ್ಗರ್ಸೆ, ಆಡಳಿತ ಮಂಡಳಿಯ ಸದಸ್ಯರಾಗಿ ಕೊಗ್ಗ ಗಾಣಿಗ ಕುಂದಾಪುರ,ಪರಮೇಶ್ವರ ಗಾಣಿಗ ಕುಂದಾಪುರ, ಎಚ್.ಕೆ.ನರಸಿಂಹ ಹಂಗಳೂರು, ಸೀತಾರಾಮ ಗಾಣಿಗ ಹಾಲಾಡಿ, ವೆಂಕಟರಮಣ ಗಾಣಿಗ ಕಡಿಕೆ, ಪುಂಡಲೀಕ ಗಾಣಿಗ ಗೋಪಾಡಿ, ಶೇಖರ ಗಾಣಿಗ ಮೊವಾಡಿ, ಎಚ್,ಸುಬ್ಬಣ್ಣ ಹೆರಂಜಾಲು, ಶಿವಾನಂದ ಗಾಣಿಗ ಉಪ್ಪುಂದ, ನಾರಾಯಣ ಗಾಣಿಗ ಮೇಲಂಡಿ,ಭಾಸ್ಕರ್ ಗಾಣಿಗ ಎಂ ಕುಂದಾಪುರ, ದಿನೇಶ್ ಗಾಣಿಗ ನಾವುಂದ,ನರಸಿಂಹ ಗಾಣಿಗ ಹರೆಗೋಡು, ಪ್ರಸಾದ್ ಕೋಡಿ, ರಾಘವೇಂದ್ರ ಶಿರೂರು, ಸವಿತಾ ಬೈಂದೂರು, ಕೃಷ್ಣ ಗಾಣಿಗ ಹಾಲಂಬೇರು, ರಾಜು ಗಾಣಿಗ ಹೊಸಂಗಡಿ, ಗೋಪಾಲ ಗಾಣಿಗ ಆನಗಳ್ಳಿ, ಶ್ವೇತಾ ಗಣೇಶ್ ಗಾಣಿಗ ಬಳ್ಳೂರು, ಗುರುರಾಜ ಗಾಣಿಗ ತೆಕ್ಕಟ್ಟೆ ಆಯ್ಕೆಗೊಂಡರು.