ಕುಂದಾಪುರ: ಕುಂದಾಪುರದ ಡಾ ।ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ವಾರಾಹಿಯ ಮನಮೋಹಕ ಪ್ರಕೃತಿಯ ಮಡಿಲಿನಲ್ಲಿ ಕಂಗೊಳಿಸುತ್ತಿರುವ ಸುಂದರ ಶೈಕ್ಷಣಿಕ ಸಂಸ್ಥೆ. ಮೌಲ್ಯಯುತ ಶಿಕ್ಷಣದ ಜೊತೆಜೊತೆಗೆ ಜೀವನಕ್ಕೆ ಅಗತ್ಯವಾದ ವಿವಿಧ ಕ್ಷೇತ್ರಗಳ ಶಿಕ್ಷಣವನ್ನೂ ನೀಡುತ್ತಿರುವ ಈ ಸಂಸ್ಥೆ ನೂರಾರು ವಿದ್ಯಾರ್ಥಿಗಳಿಗೆ ಬದುಕಿನ ದಾರಿಯನ್ನು ತೋರಿಸಿದೆ. ಸಾರ್ವಜನಿಕ ವಲಯದಲ್ಲೂ ಈ ಕಾಲೇಜಿಗೆ ಮಹತ್ತರವಾದ ಮನ್ನಣೆಗಳು ದೊರಕುತ್ತಿವೆ .
♦ ಸಂಸ್ಥೆಯ ವಿಶೇಷಗಳು ಹೀಗಿವೆ:
ಡಾ ।ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಳೆದ ಶೈಕ್ಷಣಿಕ ವರ್ಷ ಆರಂಭಿಸಿದ ವಿವಿಧ ಸರ್ಟಿಫಿಕೇಟ್ ಕೋರ್ಸ್ ಗಳು , ಕ್ಯಾಂಪಸ್ ಪ್ಲೇಸ್ಮೆಂಟ್ ಟ್ರೈನಿಂಗ್ ಗಳು, ವೈವಿಧ್ಯಮಯ ಕಾರ್ಯಕ್ರಮಗಳು ಸಂಸ್ಥೆಯನ್ನು ಮತ್ತಷ್ಟು ವಿದ್ಯಾರ್ಥಿ ಸ್ನೇಹಿಯಾಗಿ ರೂಪಿಸುತ್ತಿದೆ.
ಪ್ರತಿಭಾವಂತ ಪ್ರಾಧ್ಯಾಪಕರ ತಂಡವೇ ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿದೆ. Rank ಪಡೆದವರು, ಪ್ರತಿಭಾವಂತ ಯಕ್ಷಗಾನ ಕಲಾವಿದರು , ರಂಗಭೂಮಿ ನಟನೆಯಲ್ಲಿ ಗುರುತಿಸಿಕೊಂಡವರು, ಸಾಹಿತ್ಯ ಸಂಗೀತ ಸಾಧಕರು, ನಿರ್ದೇಶನದಲ್ಲಿ ನೈಪುಣ್ಯತೆ ಪಡೆದವರು , ವಾಗ್ಮಿಗಳು, ನಿರೂಪಕರು, ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಬಹುಮುಖ ಪ್ರತಿಭೆಯುಳ್ಳ ಪ್ರಾಧ್ಯಾಪಕರ ಸಮೂಹವೇ ಇಲ್ಲಿದೆ.
ಆ ಮೂಲಕ ವಿದ್ಯಾರ್ಥಿಗಳಿಗೂ ವಿವಿಧ ಕ್ಷೇತ್ರಗಳ ಜ್ಞಾನವನ್ನು ಧಾರೆಯೆರೆಯುತ್ತಿದ್ದಾರೆ ಉಪನ್ಯಾಸಕರು. ವಿದ್ಯಾರ್ಥಿಗಳ ವಿವಿಧ ಅಭಿರುಚಿಗೆ ತಕ್ಕಂತೆ 22 ವಿವಿಧ ವೇದಿಕೆಗಳು ,ಉತ್ತಮ ಗ್ರಂಥಾಲಯ ಮತ್ತು ಪ್ರಯೋಗಾಲಯ ,1400 ವಿದ್ಯಾರ್ಥಿಗಳು ಕುಳಿತು ಕಾರ್ಯಕ್ರಮ ನೋಡಬಲ್ಲ ವಿಶಾಲವಾದ ಕೇರಳ ಮಾದರಿಯ ಸಭಾಂಗಣ ಹೀಗೆ ಎಲ್ಲವನ್ನೂ ಒಳಗೊಂಡ ಸುಸಜ್ಜಿತವಾದ ಪದವಿ ಕಾಲೇಜು . ಡಾ ।ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು. ಒಳ್ಳೆಯ ಕಾಲೇಜಿನಲ್ಲಿ ಪದವಿ ಓದಬೇಕು,ವಿವಿಧ ಕ್ಷೇತ್ರಗಳಲ್ಲಿ ಏನನ್ನಾದರೂ ಸಾಧಿಸಬೇಕು ಎನ್ನುವವರಿಗೆ ಇದು ದಿ ಬೆಸ್ಟ್ ಕಾಲೇಜು.












