ಕುಂದಾಪುರ ಯುವ ಬಂಟರ ಸಂಘದಿಂದ ಚಿಕಿತ್ಸೆಗೆ ನೆರವು

ಕುಂದಾಪುರ: ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ಎರಡು ಕಿಡ್ನಿಗಳು ವೈಫಲ್ಯಗೊಂಡ ಬೆಳ್ಳಾಲ ಗ್ರಾಮದ ಮೋರ್ಟು ನಿವಾಸಿ ಸುರಕ್ಷ್ ಶೆಟ್ಟಿಯ ಚಿಕಿತ್ಸೆಗೆ ಅವರ ತಾಯಿ ವೇದಾವತಿ ಶೆಟ್ಟಿ ಅವರಿಗೆ, ಸಂಘದ ಗೌರವ ಮಹಾಪೋಷಕರಾದ ಕಂದಾವರ ಸತೀಶ್ ಶೆಟ್ಟಿ ಹಾಗೂ ಸಂಘದ ಅಧ್ಯಕ್ಷ ಸುನಿಲ್ ಶೆಟ್ಟಿ ಹೇರಿಕುದ್ರು ಸಹಾಯ ಧನದ ಚೆಕ್ ವಿತರಿಸಿದರು.

ಈ ಸಂದರ್ಭದಲ್ಲಿ ಸಂಘದ ಕೋಶಾಧಿಕಾರಿ ನಿತಿನ್ ಶೆಟ್ಟಿ ಹುಂಚನಿ, ಸದಸ್ಯರಾದ ಚೇತನ್ ಶೆಟ್ಟಿ ಕೋವಾಡಿ, ಅರ್ಜುನ್ ಶೆಟ್ಟಿ ಆವರ್ಸೆ ಉಪಸ್ಥಿತರಿದ್ದರು.