ಕುಂದಾಪುರ: ಮೂಡಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ತಂಡಕ್ಕೆ ಪ್ರಶಸ್ತಿ.

ಕುಂದಾಪುರ: ಮೂಡಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕುಂದಾಪುರ ತಂಡವು ಸ್ಥಳೀಯ ನಾವಿಕ್ ನ್ಯಾವಿಗೇಷನ್ ಅಪ್ಲಿಕೇಶನ್ನೊಂದಿಗೆ ನಿಟ್ಟೆ ಯುವ ಉದ್ಯಮಿಗಳ ಶೃಂಗಸಭೆಯಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಭಾರತದ ಸ್ಥಳೀಯ ನಾವಿಕ್ ಉಪಗ್ರಹ ವ್ಯವಸ್ಥೆಯನ್ನು ಉತ್ತೇಜಿಸುವ ಮತ್ತು ವಿದೇಶಿ ನ್ಯಾವಿಗೇಷನ್ ನೆಟ್ವರ್ಕ್ಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ನವೀನ ನ್ಯಾವಿಗೇಷನ್ ಅಪ್ಲಿಕೇಶನ್ಗಾಗಿ ಈ ಪ್ರಶಸ್ತಿ ಲಭಿಸಿದೆ.

ಡಾ. ಜೆ. ಪ್ರಕಾಶ್ ಮತ್ತು ಶ್ರೀ ಗಗನ್ ಬಂಗೇರ ಬಿ. ಟಿ ಅವರ ಮಾರ್ಗದರ್ಶನದಲ್ಲಿ ನವೀನ್ ಪಾಟೀಲ್, ಶಶಾಂಕ್ ಎಸ್. ಎನ್, ಮೇಘಶ್ರೀ ಮತ್ತು ಯಶಸ್ವಿನಿ ಅವರನ್ನೊಳಗೊಂಡ ತಂಡವು “ಇಂಡಿಯನ್ ನ್ಯಾವಿಗೇಷನ್ ಇಂಡಿಯನ್ ನಾವಿಕ್” ಎಂಬ ಕ್ರಾಸ್-ಪ್ಲಾಟ್ಫಾರ್ಮ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿತ್ತು.