ಪುಣ್ಯ.. ಔಟ್ ಆಫ್ ಸಿಲೇಬಸ್ ಯಾವ್ದೂ ಕೊಡ್ಲಿಲ್ಲ… ಎಕ್ಸಾಮ್ ಬರೆದು ಬಂದ ಮಕ್ಕಳ ಸಂಭ್ರಮ!

– ಶ್ರೀಕಾಂತ ಹೆಮ್ಮಾಡಿ
ಕುಂದಾಪುರ: ಪರೀಕ್ಷಾ ಸಮಯ ಮುಗಿಯುತ್ತಿದ್ದಂತೆ ಕಾಲೇಜು ಕಾಂಪೌಂಡ್ ಹೊರಗೆ ನಿಂತು ಮಕ್ಕಳ ಬರುವಿಕೆಗಾಗಿ ಕಾದು ಸುಸ್ತಾದ ಪೋಷಕರು.. ಪರೀಕ್ಷೆ ಮುಗಿಸಿ ಬಂದ ಎಲ್ಲಾ ವಿದ್ಯಾರ್ಥಿಗಳ ಮೊಗದಲ್ಲೂ ಮಂದಹಾಸ.. ಪ್ರಶ್ನೆ ಪತ್ರಿಕೆ ಹಿಡಿದು ಗುಂಪುಗುಂಪಾಗಿ ವಿಶ್ಲೇಷಣೆಯಲ್ಲಿ ತೊಡಗಿಕೊಂಡಿರುವ ವಿದ್ಯಾರ್ಥಿಗಳ ತಂಡ.. ಜೊತೆಗೆ ತಮ್ಮ ಶಿಕ್ಷಕಿಯ ಬಳಿ ಕೇಳಿ ಅಂಕಗಳನ್ನು ಖಚಿತಪಡಸಿಕೊಳ್ಳುತ್ತಿರುವ ದೃಶ್ಯ..…ಇವೆಲ್ಲವೂ ಒಂದೆಡೆ ಕಂಡುಬಂದದ್ದು ಇಲ್ಲಿನ ಬೋರ್ಡ್ ಹೈಸ್ಕೂಲು ಆವರಣದಲ್ಲಿ..

ಬುಧವಾರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಎದುರಿಸಿ ಮಧ್ಯಾಹ್ನ ಇಲ್ಲಿನ ಜೂನಿಯರ್ ಕಾಲೇಜು ಸರ್ಕಾರಿ ಪದವಿಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಿಂದ ಹೊರಬಂದ ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳೊಂದಿಗೆ ಮಾತುಕತೆಯಲ್ಲಿ ತೊಡಗಿಕೊಂಡ ದೃಶ್ಯಗಳಿವು.

ಪುಣ್ಯ… ಔಟ್ ಆಫ್ ಸಿಲೇಬಸ್ ಯಾವ್ದೂ ಕೊಡ್ಲಿಲ್ಲ: ವಿದ್ಯಾರ್ಥಿಗಳ ಕುಂದಾಪುರ ಕನ್ನಡ ಸಂಭಾಷಣೆ:
ನಿಂಗ್ ಹ್ಯಾಂಗ್ ಅಯ್ತ್.. ನಂಗಂತೂ ಫುಲ್ ಈಸಿ ಅಯ್ತ್.. ನೀನ್ ಎರ್ಡ್ ಮಾರ್ಕಿಂದ್ ಎಂತ ಮಾಡ್ದೆ.. ಪುಣ್ಯ ಔಟ್ ಆಫ್ ಸಿಲೇಬಸ್ ಯಾವ್ದೂ ಕೊಡ್ಲಿಲ್ಲ.. ಅಬ್ಬಾ ಅಂಬಾಂಗ್ ಅಯ್ತ್.. ಫಸ್ಟ್ ಕ್ವೆಶನ್ ನೋಡಿ ಹೆದ್ರಿಕಿ ಅಯ್ತ್..ಆಮೇಲ್ ಎಲ್ಲಾ ಸಲೀಸಾಗಿ ಬರ್ದೆ.. ಐದ್ ಮಾರ್ಕಿದ್ ಈಸಿ ಬಂದಿತ್.. ನೀನ್ ಸಿಗ್ಮಾ ಬರ್ದಿದ್ಯಾ?

-ಸುಕನ್ಯಾ ಭಟ್, ಭೌತ ಶಾಸ್ತ್ರ ಉಪನ್ಯಾಸಕಿ
ಈ ಬಾರಿ ಸುಲಭದ ಪ್ರಶ್ನೆ ಪತ್ರಿಕೆ ಬಂದಿದೆ. ಪಠ್ಯಪುಸಕ್ತದ ಹೊರಗಿನ ಪ್ರಶ್ನೆ ಯಾವುದೂ ಬಂದಿಲ್ಲ. ಚೆನ್ನಾಗಿ ಅಭ್ಯಾಸ ನಡೆಸಿದರೆ ನೂರಕ್ಕೆ ನೂರು ಅಂಕ ಪಡೆಯಬಹುದು. ವಿದ್ಯಾರ್ಥಿಗಳು ತುಂಬಾ ಖುಷಿಯಲ್ಲಿದ್ದಾರೆ.