ಕುಂದಾಪುರ: ಎಂ ಐ ಟಿ ಕುಂದಾಪುರ ಇಲ್ಲಿನ ಎಂ.ಬಿ.ಎ ವಿಭಾಗದಲ್ಲಿ ನ್ಯಾವಿಗೇಟಿಂಗ್ ದಿ ಡಿಜಿಟಲ್ ಫ್ರಾಂಟಿಯರ್: ದಿ ಫ್ಯೂಚರ್ ಆಫ್ ಟೆಕ್-ಡ್ರೈವನ್ ಎಂಟರ್‌ಪ್ರೈಸಸ್ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಅನೀಶ್ ಬಿ., ಬಿಸಿನೆಸ್ ಅನಾಲಿಸ್ಟ್, ಟಿಎಟೊಎವ್ರಿ, ಬೆಂಗಳೂರು ಇವರು ಆಗಮಿಸಿ ಪ್ರಥಮ ವರ್ಷದ ಎಂ.ಬಿ.ಎ ವಿದ್ಯಾರ್ಥಿಗಳಿಗೆ ಐಟಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ, ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಯುಗದಲ್ಲಿ ಎಂ.ಬಿ.ಎ ಪದವೀಧರರ ಪಾತ್ರದ ಬಗ್ಗೆ ತಿಳಿಸಿದರು. ಹಾಗೆಯೇ ಕೆಲವೊಂದು ಕೇಸ್ ಸ್ಟಡಿಗಳ ಉದಾಹರಣೆ ನೀಡಿ ವಿದ್ಯಾರ್ಥಿಗಳು ಆಲೋಚಿಸಬೇಕಾದ ವಿವಿಧ ಸ್ತರಗಳನ್ನು ತಿಳಿಹೇಳಿದರು.
ಈ ಕಾರ್ಯಕ್ರಮದಲ್ಲಿ ಎಂ.ಬಿ.ಎ ವಿಭಾಗದ ಮುಖ್ಯಸ್ಥೆ ಡಾ. ಸುಚಿತ್ರ ಪೂಜಾರಿ ಮತ್ತು ವಿಭಾಗದ ಇತರ ಉಪನ್ಯಾಸಕರು ಉಪಸ್ಥಿತರಿದ್ದರು. ಎಂ.ಬಿ.ಎ ವಿದ್ಯಾರ್ಥಿನಿ ಕುಮಾರಿ ಸಿಂಚನಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.












