ಕುಂದಾಪುರ ವೆಂಕಟರಮಣ ಪದವಿ ಪೂರ್ವ ಕಾಲೇಜು: ಕೆಸರಲ್ಲೊಂದಿನ ನೆಟ್ಟಿ ಕಾರ್ಯಕ್ರಮ

ಕುಂದಾಪುರ : ದಿನಾಂಕ 19.7.2025 ರಂದು ಆನಗಳ್ಳಿ ಯಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಿಗೆ ಕೃಷಿ ಚಟುವಟಿಕೆಗಳ ಕುರಿತು ಪ್ರಾಯೋಗಿಕ ಜ್ಞಾನ ವನ್ನು ನೀಡಲು ಕೆಸರಲ್ಲೊಂದಿನ ನೆಟ್ಟಿ ಎನ್ನುವ ವಿಶೇಷ ಕಾರ್ಯಕ್ರಮ ಆಯೋಜಿನೆಗೊಂಡಿತ್ತು.

ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸಂದೀಪ್ ಗಾಣಿಗ ಅವರು ಚಾಲನೆ ನೀಡಿದರು.ಉಪ ಪ್ರಾಂಶುಪಾಲರಾದ ಸುಜಯ್ ಕೊಟೆಗಾರ್, ವಾಣಿಜ್ಯ ಶಾಸ್ತ್ರ ವಿಭಾಗದ ಇನ್ ಚಾರ್ಜ್ ಶ್ರೀಮತಿ ಲತಾ ಪೈ ಹಾಗೂ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ಕೆಸರು ಗದ್ದೆಯಲ್ಲಿ ಅನೇಕ ಮನೋರಂಜನಾ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಯಿತು.ತದನಂತರ ವಿದ್ಯಾರ್ಥಿಗಳಿಂದ ಗದ್ದೆ ನಾಟಿಯನ್ನು ಮಾಡಿಸುವುದರ ಮೂಲಕ ನೆಟ್ಟಿಯ ಬಗ್ಗೆ ಪ್ರಾಯೋಗಿಕ ಮಾಹಿತಿಯನ್ನು ನೀಡಲಾಯಿತು.