ಉಡುಪಿ: ಕೃಷಿ ಇಲಾಖೆಯ ವತಿಯಿಂದ 2024-25 ನೇ ಸಾಲಿನಲ್ಲಿ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿಗಳ ಫಸಲ್ ಭಿಮಾ ಯೋಜನೆಯಡಿ ಬೈಂದೂರು ತಾಲೂಕಿನ 58 ಹಾಗೂ ಕುಂದಾಪುರ ತಾಲೂಕಿನ 38 ಪ್ರಸ್ತಾವನೆಗಳು ವಿಮಾ ಸಂಸ್ಥೆಯಿoದ ತಿರಸ್ಕೃತಗೊಂಡಿದ್ದು, ತಿರಸ್ಕೃತಗೊಂಡ ರೈತರ ಪ್ರಸ್ತಾವನೆಯ ಪಟ್ಟಿಯನ್ನು ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ರೈತ ಸಂಪರ್ಕ ಕೇಂದ್ರ ಹಾಗೂ ಸಂಬoಧಿತ ಗ್ರಾಮ ಪಂಚಾಯತ್ ಕಚೇರಿಗಳ ನೋಟೀಸ್ ಬೋರ್ಡಿನಲ್ಲಿ ರೈತರ ಮಾಹಿತಿಗಾಗಿ ಪ್ರಕಟಿಸಿ, ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕಲ್ಪಿಸಿದ್ದು, ಈವರೆಗೂ ಆಕ್ಷೇಪಣೆ ಸಲ್ಲಿಕೆಯಾಗದ ಹಿನ್ನೆಲೆ, ಮತ್ತೊಮ್ಮೆ ಜೂನ್ 9 ರ ವರೆಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕಲ್ಪಿಸಲಾಗಿರುತ್ತದೆ.
ನಿಗದಿಪಡಿಸಿದ ಕೊನೆಯ ದಿನಾಂಕದ ಒಳಗಾಗಿ ರೈತರು ತಿರಸ್ಕೃತ ವಿಮಾ ಪ್ರಸ್ತಾವನೆಗಳ ಕುರಿತು ಪರಿಶೀಲಿಸಿ, ತಮ್ಮ ಆಕ್ಷೇಪಣೆಗಳಿದ್ದಲ್ಲಿ ಮನವಿಯನ್ನು ಲಿಖಿತವಾಗಿ ಬೆಳೆ ವಿಮೆಗೆ ನೊಂದಾಯಿಸಿದ ಭತ್ತದ ಬೆಳೆ ಬೆಳೆದ ಬಗ್ಗೆ ಅಗತ್ಯ ದಾಖಲಾತಿಗಳೊಂದಿಗೆ ಕುಂದಾಪುರ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಹಾಗೂ ಕುಂದಾಪುರ, ಬೈಂದೂರು ಮತ್ತು ವಂಡ್ಸೆ ರೈತ ಸಂಪರ್ಕ ಕೇಂದ್ರದ ಕಚೇರಿಗಳಲ್ಲಿ ಜೂನ್ 9 ರ ಒಳಗಾಗಿ ಮುದ್ದಾಂ ಅಥವಾ ಅಂಚೆ ಮೂಲಕ ಸಲ್ಲಿಸುವಂತೆ ಕುಂದಾಪುರ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.

















