ಕುಂದಾಪುರ: ಐಎಂಜೆ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಮತ್ತು ಮೂಡ್ಲಕಟ್ಟೆ ಪ್ಯಾರಾಮೆಡಿಕಲ್ ವಿಜ್ಞಾನ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗಾಗಿ ವೃತ್ತಿ ಮಾರ್ಗದರ್ಶನ ತರಬೇತಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಮುಖ್ಯ ಅತಿಥಿ ಸ್ವರಾಜ್ ಶೆಟ್ಟಿ (ರೇಡಿಯೋ ಟೆಕ್ನಾಲಜಿಸ್ಟ್ ಮತ್ತು ಉದ್ಯಮಿ) ಅವರು ದೀಪ ಬಳಗಿಸಿ ಉದ್ಘಾಟಿಸಿದರು.
ವೇದಿಕೆಯಲ್ಲಿ ಐಎಂಜೆ ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್‌ನ ಡೀನ್,ಡಾ. ಪದ್ಮಚಾರಣ ಸ್ವೈನ್, ಐಎಂಜೆ ಇನ್ಸ್ಟಿಟ್ಯೂಟ್‌ಗಳ ಬ್ರ್ಯಾಂಡ್ ಬಿಲ್ಡಿಂಗ್ ನಿರ್ದೇಶಕರು ಡಾ. ರಾಮಕೃಷ್ಣ ಹೆಗ್ಡೆ, ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನ ಪ್ರಿನ್ಸಿಪಾಲ್ ಶ್ರೀಮತಿ ಜೆನಿಫರ್ ಫ್ರೀಡಾ ಮೆನೆಜಸ್, ಐಎಂಜೆ ಅಲೈಡ್ ಹೆಲ್ತ್ ಸೈನ್ಸಸ್ ಹಾಗೂ ಮೂಡ್ಲಕಟ್ಟೆ ಪ್ಯಾರಾಮೆಡಿಕಲ್ ವಿಜ್ಞಾನ ಸಂಸ್ಥೆಗಳ ಉಪಪ್ರಾಂಶುಪಾಲರಾದ ಶ್ರೀಮತಿ ಸೌಜನ್ಯಾ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಡಾ. ಪದ್ಮಚಾರಣ ಸ್ವೈನ್ ಅವರು ವೃತ್ತಿ ಮಾರ್ಗದರ್ಶನದ ಮಹತ್ವದ ಬಗ್ಗೆ ಮಾತನಾಡಿದರು ಮತ್ತು ಶ್ರೀಮತಿ ಸೌಜನ್ಯಾ ಅವರು ಅತಿಥಿಯನ್ನು ಪರಿಚಯಿಸಿದರು. ಮುಖ್ಯ ಅತಿಥಿಯಾದ ಸ್ವರಾಜ್ ಶೆಟ್ಟಿ ಅವರು ಆರೋಗ್ಯ ವೃತ್ತಿಯಲ್ಲಿ ಇರುವ ವೃತ್ತಿಪರ ಅವಕಾಶಗಳು ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಲಭ್ಯವಿರುವ ವಿಭಿನ್ನ ಅವಕಾಶಗಳ ಕುರಿತು ಅಮೂಲ್ಯವಾದ ಮಾಹಿತಿ ನೀಡಿದರು.
ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಸಿಂಧು ಅವರು ನಿರೂಪಿಸಿದರು. ಪ್ರೊ. ಸುಷ್ಮಾ ಉಪಾಧ್ಯಾಯ ಅವರು ಸ್ವಾಗತಿಸಿದರು ಮತ್ತು ಪ್ರೊ. ಪವಿತ್ರಾ ಅವರು ಧನ್ಯವಾದ ಅರ್ಪಿಸಿದರು. ಈ ಕಾರ್ಯಕ್ರಮವನ್ನು ಆಡಳಿತಾಧಿಕಾರಿ ಪಾರ್ಥ ಸಾರಥಿ ಹಾಗು ಪ್ರೊ. ಅರ್ಪಿತಾ ಸಂಯೋಜಿಸಿದ್ದರು.












