ಕುಂದಾಪುರ: ಸಾವಯವ ಸಿರಿ ಅನುಷ್ಠಾನಕ್ಕೆ ಅರ್ಜಿ ಆಹ್ವಾನ

ಉಡುಪಿ:  ಕೃಷಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಹೊಸ ಸಾವಯುವ ಕೃಷಿ ಉತ್ತೇಜನಗೊಳಿಸಲು, ಜನರಿಗೆ ಆರೋಗ್ಯಕರ ಹಾಗೂ ರಾಸಾಯನಿಕ ಮುಕ್ತ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳನ್ನು ದೊರಕಿಸಲು ಸಾವಯವ ಸಿರಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿರುತ್ತದೆ.

ರೈತರನ್ನು ಸಾವಯವ ಕೃಷಿಗೆ ಉತ್ತೇಜಿಸಲು, ಸಾವಯವ ಕೃಷಿಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ ಹಾಗೂ 10 ವರ್ಷಗಳ ಅನುಭವವುಳ್ಳ ಟ್ರಸ್ಟ್ ಹಾಗೂ ಸೊಸೈಟಿ ಕಾಯಿದೆಯಡಿ ನೋಂದಾಯಿತ ಸಾವಯವ ಕೃಷಿಕರ ಸಂಘ, ಸಾವಯವ ಒಕ್ಕೂಟ ಅಥವಾ ಸಾವಯವ ಗುಂಪುಗಳು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಮಾರ್ಚ್ 17 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಾಯಕ ಕೃಷಿ ನಿರ್ದೇಶಕರು, ಕುಂದಾಪುರ ಕಚೇರಿಯನ್ನು ಸಂಪರ್ಕಿಸುವಂತೆ ಕುಂದಾಪುರ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.