ಕುಂದಾಪುರ: ಬಿದ್ಕಲ್ ಕಟ್ಟೆ ಕಾಲೇಜು ಮೈದಾನದಲ್ಲಿ ಅದ್ದೂರಿ ಕುಲಾಲ ಕ್ರೀಡೋತ್ಸವ.

ಕುಂದಾಪುರ: ಬಿದ್ಕಲ್ ಕಟ್ಟೆ ಕಾಲೇಜು ಮೈದಾನದಲ್ಲಿ ಕುಲಾಲ ಸಂಘ (ರಿ) ಕುಂದಾಪುರ ಮತ್ತು ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ (ರಿ) ಮಂಗಳೂರು ಇದರ ಕುಂದಾಪುರ & ಬೈಂದೂರು ವಿಧಾನಸಭಾ ಘಟಕಗಳ ನೇತೃತ್ವದಲ್ಲಿ ಡಿ. 14 ರಂದು ಅದ್ದೂರಿ ಕುಲಾಲ ಕ್ರೀಡೋತ್ಸವ ನಡೆಯಿತು.

ಕ್ರೀಡೋತ್ಸವದ ಉದ್ಘಾಟನೆಯನ್ನು ಜಯರತ್ನ ಟ್ರಸ್ಟ್ ಪ್ರವರ್ತಕರು ಹಾಗೂ ಕುಂದಾಪುರ ಕಾಂಗ್ರೆಸ್ ಮುಖಂಡರಾದ ದಿನೇಶ್ ಹೆಗ್ಡೆಯವರು ನೆರವೇರಿಸಿದರು .

ಸಭೆಯ ಅಧ್ಯಕ್ಷತೆಯನ್ನು ರಾಘವೇಂದ್ರ ಕುಲಾಲ ಹೆಮ್ಮಾಡಿ ವಹಿಸಿದ್ದರು. ದಕ್ಷಿಣಕನ್ನಡ ಜಿಲ್ಲಾರಾಜೋತ್ಸವ ಪ್ರಶಸ್ತಿ ಪುರಸ್ಕೃತರಾದ ಅನಿಲ್ ದಾಸ್ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.

ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ತಸ್ಮಯ್ ಆರ್‌ ಕುಲಾಲ್ ( ಕಬ್ಬಡಿ ರಾಷ್ಟ್ರಮಟ್ಟ) , ಪ್ರೀತಮ್ ಕುಲಾಲ್ ( ಕರಾಟೆ ಜಿಲ್ಲಾ ಮಟ್ಟ ) ಇವರನ್ನು ಗೌರವಿಸಲಾಯಿತು.
ಇದೆ ಸಂದರ್ಭದಲ್ಲಿ ಜನವರಿ 04 ರಂದು ನಡೆಯುವ ಕುಂಭ ಕಲಾವಳಿ ಆಮಂತ್ರಣ ಪತ್ರಿಕೆಯನ್ನು ಅನಾವರಣ ಮಾಡಲಾಯಿತು.

ಸಭೆಯಲ್ಲಿ ಮೊಳಹಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಚಂದ್ರಶೇಖರ ಶೆಟ್ಟಿ ದ್ಯಾವಲಬೆಟ್ಟು , ಪ್ರಭಾಕರ್ ಕುಲಾಲ ಜನ್ಸಾಲೆ , ರವಿ ಕುಲಾಲ , ಬಾಲಾಜಿ ಮೆಟಲ್ ಟೆಕ್ ಬೆಂಗಳೂರು. ಸತೀಶ್ ಕುಲಾಲ ನಡೂರು , ಮಂಜುನಾಥ ಕುಲಾಲ ಜನ್ಸಾಲೆ , ರಮೇಶ ಕುಲಾಲ ಕಾವ್ರಡಿ , ಶಂಕರ ಕುಲಾಲ ಮೊಳಹಳ್ಳಿ, ಕೃಷ್ಣ ಕುಲಾಲ ನಡೂರು , ಹರೀಶ್ ಕುಲಾಲ ಕಟ್ಟೇರಿ , ಸುರೇಶ್ ಕುಲಾಲ ಮೆಟ್ಟಿನಹೊಳೆ , ಅನಿತಾ ಅಶೋಕ ಕುಲಾಲ ನೂಜಿ , ದಿವ್ಯಾಸುರೇಶ್ ಕುಲಾಲ್ , ದಿನೇಶ್ ಕುಲಾಲ ಕೆದೂರು ಮತ್ತು ಸಮುದಾಯದ ಪ್ರಮುಖರಾದ ವಿಠಲ ಕುಲಾಲ ನೂಜಿ , ದಿನೇಶ್ ಕುಲಾಲ , ಸುರೇಶ್ ಕುಲಾಲ ವಕ್ವಾಡಿ , ಸುದಾಕರ್ ಕುಲಾಲ ಶಂಕರನಾರಾಯಣ , ಕಾರ್ಯದರ್ಶಿ ಸುರೇಶ್ ಕುಲಾಲ್ ಆಜ್ರಿ, ಶಂಕರ್ ಕುಲಾಲ್ ಹೆಬ್ಗೋಳಿ, ಹರೀಶ್ ಹೊಂಬಾಡಿ, ಮಂಜುನಾಥ ಕುಲಾಲ, ಮಾಲತಿ ನಾಗರಾಜ್ ಕುಲಾಲ್ ಜಯಲಕ್ಷ್ಮೀ ವಿ ಕುಲಾಲ್ ಮತ್ತು ಇತರರು ಉಪಸ್ಥಿತರಿದ್ದರು. ರಾಜು ಕುಲಾಲ ನೂಜಿ ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮವನ್ನು ರೇಖಾ ಪ್ರಭಾಕರ್ ಕುಲಾಲ ನಿರೂಪಿಸಿದರು.