ಕುಂದಾಪುರ: ಗಿರಿಜಾ ಹೆಲ್ತ್‌ಕೇರ್ ಮತ್ತು ಸರ್ಜಿಕಲ್ಸ್ ವತಿಯಿಂದ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಸಹಯೋಗದಲ್ಲಿ ಉಚಿತ ವೈದ್ಯಕೀಯ ಶಿಬಿರವು ಶುಕ್ರವಾರದಂದು ಕುಂದಾಪುರ ತಾಲೂಕಿನ ಬಸ್ರೂರಿನಲ್ಲಿ ನಡೆಯಿತು.
ಸುಮಾರು 150 ರೋಗಿಗಳು ಶಿಬಿರದ ಪ್ರಯೋಜನವನ್ನು ಪಡೆದರು.
ಈ ಸಂದರ್ಭದಲ್ಲಿ ಆಟೋ ಚಾಲಕ ಮಾಲಕ ಸಂಘದ ಅಧ್ಯಕ್ಷ ಅಶೋಕ್, ಗಿರಿಜಾ ಹೆಲ್ತ್‌ಕೇರ್ ಮತ್ತು ಸರ್ಜಿಕಲ್ಸ್ ಮತ್ತು ಮಾರ್ಕೆಟಿಂಗ್ ಮ್ಯಾನೇಜರ್ ಯತೀಶ್ ಕುಮಾರ್, ಕೃಷ್ಣ, ಹೇಮಾ ಯತೀಶ್ ಉಪಸ್ಥಿತರಿದ್ದರು.