udupixpress
Home Trending ಕುಂದಾಪುರ ಡಾ. ಬಿ.ಬಿ. ಹೆಗ್ಡೆ ಕಾಲೇಜು ಕೈಗಾರಿಕಾ ಭೇಟಿ; ಉತ್ಪನ್ನಗಳ ತಯಾರಿಕೆ ಮತ್ತು ಪ್ರಾತ್ಯಕ್ಷಿಕೆ

ಕುಂದಾಪುರ ಡಾ. ಬಿ.ಬಿ. ಹೆಗ್ಡೆ ಕಾಲೇಜು ಕೈಗಾರಿಕಾ ಭೇಟಿ; ಉತ್ಪನ್ನಗಳ ತಯಾರಿಕೆ ಮತ್ತು ಪ್ರಾತ್ಯಕ್ಷಿಕೆ

ಕುಂದಾಪುರ: ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿಜ್ಞಾನ ವಿಭಾಗದ ಆಶ್ರಯದಲ್ಲಿ ಕೈಗಾರಿಕಾ ಭೇಟಿಯ ಭಾಗವಾಗಿ ಕೋಟೇಶ್ವರದ ಸನ್‍ರೈಸ್ ಪೈಪ್ ಇಂಡಸ್ಟ್ರಿ ಮತ್ತು ರಾಜಾರಾಮ್ ಪೊಲಿಮರ್ಸ್ ಇಂಡಸ್ಟ್ರಿ ಕೋಟೇಶ್ವರ ಇಲ್ಲಿಗೆ ವಿದ್ಯಾರ್ಥಿಗಳು ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಸನ್‍ರೈಸ್ ಕೈಗಾರಿಕೆಯ ವ್ಯವಸ್ಥಾಪಕರಾದ ಕುಮಾರ್ ಹಾಗೂ ರಾಜರಾಮ್ ಪೊಲಿಮರ್ಸ್ ಇಂಡಸ್ಟ್ರಿಯ ಪಾಲುದಾರರಾದ ವಿಘ್ನೇಶ್ ಕಾಮತ್‍ ಉತ್ಪನ್ನಗಳ ತಯಾರಿಕೆ ಮತ್ತು ಪ್ರಾತ್ಯಕ್ಷಿಕೆಯ ಕುರಿತು ಉಪನ್ಯಾಸ ನೀಡಿದರು. ಜೊತೆಗೆ ಯಂತ್ರಗಳ ಕಾರ್ಯವೈಖರಿಯನ್ನು ವಿವರಿಸಿದರು.

ವಿದ್ಯಾರ್ಥಿಗಳಿಗೆ ಅವಕಾಶ ಮತ್ತು ಮಾರ್ಗದರ್ಶನ ನೀಡಿದ ಆಡಳಿತ ಮಂಡಳಿಗೆ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥೆ ಶ್ವೇತಾ ಯು. ಶೆಟ್ಟಿ ಕೃತಜ್ಞತೆ ಸಲ್ಲಿಸಿದರು.

error: Content is protected !!