ಕುಂದಾಪುರ: ತಾಲೂಕು ಕಛೇರಿ ಕುಂದಾಪುರದಲ್ಲಿ ಉಪ ತಹಶಿಲ್ದಾರರಾದ ವಿನಯ್ ಸರ್ ರವರ ಸಮುಖದಲ್ಲಿ ಕುಲಾಲ ಸಮಾಜ ಸುಧಾರಕ ಸಂಘ (ರಿ), ಕುಂದಾಪುರದ ಕುಲಾಲ ಸಮಾಜ ಭಾಂದವರ ಸಮುಖದಲ್ಲಿ 506ನೇ ಸರ್ವಜ್ಞ ಜಯಂತಿಯನ್ನು ಫೆ.20 ರಂದು ಆಚರಿಸಲಾಯಿತು.
ಸರ್ವಜ್ಞ ಜಯಂತಿಯನ್ನು ವಿನಯ್ ಉಪ ತಹಶಿಲ್ದಾರರು ದೀಪ ಬೆಳಗಿಸಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಕುಲಾಲ ಸಮಾಜ ಸುಧಾರಕ ಸಂಘ (ರಿ) ಕುಂದಾಪುರದ ಅಧ್ಯಕ್ಷರಾದ ರಾಘವೇಂದ್ರ ಕುಲಾಲ್ ಹೆಮ್ಮಾಡಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ರಮೇಶ್ ಕುಲಾಲ್ ಕಾವ್ರಾಡಿ, ಉಡುಪಿ ಜಿಲ್ಲಾ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ಶಂಕರ್ ಕುಲಾಲ್ ಮೊಳಹಳ್ಳಿ, ಕುಂದಾಪುರ ಕುಲಾಲ ಕುಂಬಾರರ ಯುವ ವೇದಿಕೆ ಅಧ್ಯಕ್ಷರಾದ ಹರೀಶ್ ಕುಲಾಲ್ ಕಟ್ಕೇರಿ, ಬೈಂದೂರು ವಿಧಾನಸಭಾ ಯುವ ವೇದಿಕೆ ಅಧ್ಯಕ್ಷರಾದ ಸುರೇಶ್ ಕುಲಾಲ್ ಮೆಟ್ಟಿನಹೊಳೆ, ಕಾರ್ಯದರ್ಶಿ ಸುರೇಶ್ ಕುಲಾಲ್ ಆಜ್ರಿ, ಜತೆ ಕಾರ್ಯದರ್ಶಿ ಶಂಕರ್ ಕುಲಾಲ್ ಹೆಬ್ಗೋಳಿ, ಮಹಿಳಾ ಘಟಕದ ಅಧ್ಯಕ್ಷರಾದ ಅನಿತಾ ಕುಲಾಲ್ ನೂಜಿ, ಕಾರ್ಯದರ್ಶಿ ದಿವ್ಯಸುರೇಶ್ ಕುಲಾಲ್ ನಿಡ್ಲಾಡಿ, ಜಯಲಕ್ಷ್ಮಿ ವಿಠ್ಠಲ ಕುಲಾಲ್, ಮೇನೆಜರ್ ಹರೀಶ್ ಕುಲಾಲ್ ಹೊಂಬಾಡಿ, ಕಾಂತರಾಜು ಮತ್ತಿತರರು ಉಪಸ್ಥಿತರಿದ್ದರು.
















