ಕಾರ್ಕಳ :ಕಾನೂನು ಪ್ರಕಾರ ಮಾರ್ಯದೆಯಿಂದ ಬದುಕಿ ಅದನ್ನು ಬಿಟ್ಟು ಕಾನೂನು ಬಾಹಿರವಾಗಿರುವ ಯಾವುದೇ ಅಕ್ರಮ ಚಟುವಟಿಕೆಗಳಲ್ಲಿ ಬಾಗಿಯಾದ್ದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧಿಕ್ಷಕ ಕುಮಾರ್ ಚಂದ್ರ ದನಗಳ್ಳರಿಗೆ ಎಚ್ಚರಿಕೆ ನೀಡಿದ್ದಾರೆ
ಅವರು ಸೋಮವಾರ ಕಾರ್ಕಳ ತಾಲೂಕು ಎಎಸ್ ಪಿ ಕಚೇರಿಯಲ್ಲಿ ಉಪವಿಭಾಗದ ವ್ಯಾಪ್ತಿಗೆ ಒಳಪಡುವ ಏಳು ಠಾಣೆಯಲ್ಲಿ ದನಗಳ್ಳ ಪ್ರಕರಣದ ಅರೋಪಿಗಳಿಗೆ ಪೇರೆಡ್ ನಡೆಸಿ ಕಾಸ್ಲ್ ತೆಗೆದು ಕೊಂಡಿದ್ದಾರೆ
ಕಾರ್ಕಳ ನಗರ ,ಕಾರ್ಕಳ ಗ್ರಾಮಂತರ, ಪಡುಬಿದ್ರೆ, ಕಾಪು, ಶಿರ್ವ ,ಹೆಬ್ರಿ ಅಜೆಕಾರು, ಠಾಣೆಯಲ್ಲಿ ಈ ಹಿಂದೆ ದನ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವ ಒಟ್ಟು 70 ಅರೋಪಿಗಳಿಗೆ ಕರೆಸಿ ಜಿಲ್ಲೆಯಲ್ಲಿ ದನಕಳ್ಳತನ ಪ್ರಕರಣ ಹೆಚ್ಚಾಗಿದ್ದು ಈಗಾಗಲೇ ಹಲವು ದೂರುಗಳು ಬಂದಿರುತ್ತದೆ. ಈ ಹಿನ್ನಲೆಯಲ್ಲಿ ಹಳೆ ಅರೋಪಿಗಳನ್ನು ಕರೆಸಿ ಯಾವುದೆ ಅಪರಾಧಗಳಿಗೆ ಬಾಗಿಯಾಗಬಾರದು ಜತೆಗೆ ದನಕಳ್ಳತನ ಪ್ರಕರಣಕ್ಕೆ ಹೋಗದಂತೆ ಎಚ್ಚರಿಕೆ ನೀಡಿದ್ದಾರೆ.
ಬದುಕಲು ಸಾವಿರಾರು ದಾರಿಗಳಿವೆ ಕಾನೂನು ಬಾಹಿರ ಚಟುವಟಿಕೆ ಯಲ್ಲಿ ಬಾಗವಹಸಿದ್ದಲ್ಲಿ ಗುಂಡಾ ಕಾಯ್ದೆ ಹಾಗೂ ಪ್ರಕರಣ ಸಾಭೀತಾದಲ್ಲಿ ಗಡಿಪಾರು ಮಾಡುವುದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಘಟನೆ ಮರುಕಳಿಸದಂತೆ ಇಂದು ಈ ಪೇರಡ್ ಹಮ್ನಿಕೊಳ್ಳಲಾಗಿದೆ ಎಂದರು.
ದನಗಳ್ಳ ಪ್ರಕರಣದಲ್ಲಿ ಬಾಗಿಯಾದ ಅರೋಪಿಗಳ ಹೊಸ ಭಾವಚಿತ್ರ, ವಿಳಾಸದೊಂದಿಗೆ ಮೊಬೈಲ್ ಸಂಖ್ಯೆ ಹಾಗೂ ಈಗಿನ ವ್ಯವಹಾರದ ಮಾಹಿತಿಯನ್ನು ಠಾಣೆಗೆ ನೀಡವಂತೆ ಸೂಚಿಸಿದ್ದಾರೆ.
ಹೆಚ್ವುವರಿ ಪೊಲೀಸ್ ಅಧೀಕ್ಷಕರು ಕುಮಾರ್ ಚಂದ್ರ, ಕಾರ್ಕಳ ಉಪವಿಭಾಗದ ಎಎಸ್ಪಿ ಪಿ. ಕೃಷ್ಣಕಾಂತ್, ಕಾರ್ಕಳ ವೃತ್ತ ನಿರೀಕ್ಷಕ ಪಿ.ವಿ. ಹಾಲಮೂರ್ತಿ ರಾವ್, ನಗರ ಠಾಣಾ ಎಸ್ಐ ನಂಜಾನಾಯ್ಕ್, ಹೆಬ್ರಿ ಠಾಣಾ ಎಸ್ಐ ಮಹಾಬಲ ಶೆಟ್ಟಿ, ಶಿರ್ವ ಎಸ್ಐ ಅಬ್ದುಲ್ ಖಾದರ್, ಪಡುಬಿದ್ರಿ ಎಸ್ಐ ಸುಬ್ಬಣ್ಣ, ಕಾಪು ಠಾಣಾ ಎಸ್ಐ ಜಯಕುಮಾರ್ ಉಪಸ್ಥಿತರಿದ್ದರು.












