ಪರ್ಕಳ: ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಕಬ್ಯಾಡಿ ಘಟಕ ಮತ್ತು ಸಮುದಾಯ ದಳ ಕಬ್ಯಾಡಿ ಇದರ ಜಂಟಿ ಆಶ್ರಯದಲ್ಲಿ ಕುಕ್ಕುದಕಟ್ಟೆಯಲ್ಲಿ ಭಾನುವಾರ ಕ್ಷಯರೋಗದ ಕುರಿತು ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಹೀರೆಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರದ ಸುರಕ್ಷಾಧಿಕಾರಿ ಯಮುನಾ ಕುಮಾರಿ ಅವರು ಕ್ಷಯರೋಗದ ಬಗ್ಗೆ ಮಾಹಿತಿ ನೀಡಿದರು.
ಒಡಿಯೂರು ಶ್ರೀಗ್ರಾಮ ವಿಕಾಸ ಯೋಜನೆಯ ಉಡುಪಿ ವಲಯಾಧ್ಯಕ್ಷ ಪ್ರಭಾಕರ ಶೆಟ್ಟಿ, ಕಬ್ಯಾಡಿ ವಲಯ ಅಧ್ಯಕ್ಷ ಸುದೇಶ್ ಪೂಜಾರಿ, ಚಂದ್ರಿಕಾ ಜಯಪ್ರಕಾಶ್, ಮಂಜುನಾಥ್, ಸಮುದಾಯ ದಳದ ಅಧ್ಯಕ್ಷ ಜಯರಾಮ್ ಶೆಟ್ಟಿಗಾರ್, ಕಾರ್ಯದರ್ಶಿ ಸತೀಶ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.