ಉಡುಪಿ : ವಿಪರೀತ ಮಳೆ ಸುರಿಯುತ್ತಿರುವ ಕಾರಣ ಕಾರ್ಕಳ ತಾಲೂಕು ಮಾಳ ಕುದುರೆಮುಖ ರಾಷ್ಟ್ರೀಯ ಹೆದ್ದಾರಿ 169 ರಸ್ತೆಯಲ್ಲಿ ಗುಡ್ಡ ಕುಸಿತ ಉಂಟಾಗಿ ಮಣ್ಣು ರಸ್ತೆಗೆ ಬೀಳುತ್ತಿದ್ದು, ಅಲ್ಲದೇ ರಸ್ತೆ ಸಮೀಪ ಇರುವ ಬೃಹತ್ ಗಾತ್ರದ ಮರಗಳು ರಸ್ತೆಗೆ ಬೀಳುತ್ತಿದ್ದು, ಈಗಾಗಲೇ ರಸ್ತೆಗೆ ಬಿದ್ದಿರುವ ಮರಗಳನ್ನು ತೆರವುಗೊಳಿಸಲಾಗಿದ್ದು, ವಿಪರೀತ ಮಳೆಯಿಂದಾಗಿ ತೆರವು ಕಾರ್ಯಾಚರಣೆ ಕಷ್ಟವಾಗುತ್ತಿದ್ದು, ವಾಹನ ಸಂಚಾರ ಮಾಡಿದ್ದಲ್ಲಿ ಪ್ರಾಣ ಹಾನಿ ಸಂಭವಿಸುವ ಸಾಧ್ಯತೆ ಇದ್ದು, ಮುಂಜಾಗೃತ ಕ್ರಮವಾಗಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮಾಳ ಕುದುರೆಮುಖ ರಾ. ಹೆ. ೧೬೯ ರಲ್ಲಿ ಸೆ. 21 ಹಾಗೂ 22 ರಂದು ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶ ಹೊರಡಿಸಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.