ಅವನಿಂದಾಗಿ ಗರ್ಭಿಣಿಯಾದೆ, ಕೊನೆಗೆ ಗರ್ಭಪಾತ ಮಾಡಿಸಿಕೊಂಡೆ, ಸಿನಿಮಾರಂಗದ ನಿಜ ಸ್ಥಿತಿ ಬಿಚ್ಚಿಟ್ಟ ನಟಿಯ ಈ ಹೇಳಿಕೆ

ಚಿತ್ರರಂಗದಲ್ಲಿ ನಟ ನಟಿಯರ ನಡುವೆ ರಹಸ್ಯ ಸಂಬಂಧಗಳು ಮಾಮೂಲು, ಮದುವೆಯಾದ ನಟ ನಟಿಯರ ನಡುವೆ ಸಾಕಷ್ಟು ಒಳ ಸಂಬಂಧಗಳು ಆಗಾಗ ಚಿತ್ರರಂಗದಲ್ಲಿ ಗಾಸಿವ್ ಆಗಿ ಹರಿದಾಡುತ್ತಿರುತ್ತದೆ. ಬಾಲಿವುಡ್‌ನಲ್ಲಿ ಇವು ಸ್ವಲ್ಪ ಹೆಚ್ಚು ಎಂದು ಹೇಳಲೇಬೇಕು. ಮದುವೆಯಾದರೂ ಇನ್ನೊಂದು ಸಂಬಂಧವನ್ನು ಗುಟ್ಟಾಗಿ ಇಟ್ಟುಕೊಟ್ಟುವ ಕೆಲವು ನಟ ನಟಿಯರು ಆಗಾಗ ಸದ್ದು ಮಾಡುತ್ತಿರುತ್ತಾರೆ.

ಇತ್ತೀಚೆಗೆ ಒಬ್ಬ ಯುವ ನಟಿಯೊಬ್ಬಳು ತನ್ನ ಜೀವನದಲ್ಲಿ ನಡೆದ ಒಂದು ಘಟನೆಯನ್ನು ಬಹಿರಂಗಪಡಿಸಿದರು. ಒಬ್ಬ ನಟನೊಂದಿಗೆ ರಾತ್ರಿ ಕಳೆದ ನಂತರ ತಾನು ಗರ್ಭಿಣಿಯಾದೆ. ನಂತರ ಯಾರಿಗೂ ತಿಳಿಯದಂತೆ ಗರ್ಭಪಾತ ಮಾಡಿಸಿಕೊಂಡಿದ್ದಾಗಿ ಬಹಿರಂಗಪಡಿಸಿದ್ದಾಳೆ. ಈಕೆಯ ಹೆಸರು ಕುಬ್ರಾ ಸೇಠ್,

ಬಾಲಿವುಡ್ ಪ್ರೇಕ್ಷಕರಿಗೆ ಈಕೆ ಪರಿಚಿತೆ.  ಮಾಡೆಲಿಂಗ್ ಆಗಿ ಆಂಕರ್ ಆಗಿ ಇವರು ಎಂಟ್ರಿ ಕೊಟ್ಟ ಬಳಿಕ ಸಿನಿ ಕ್ಷೇತ್ರಕ್ಕೆ ಬಂದು 2011ರಲ್ಲಿ ‘ರೆಡಿ’ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. “ಸೇಕ್ರೆಡ್ ಗೇಮ್ಸ್” ಎಂಬ ವೆಬ್ ಸರಣಿಯಲ್ಲಿ ಕುಕು ಪಾತ್ರದಿಂದ ಅವರು ಸಂಪೂರ್ಣ ಖ್ಯಾತಿಯನ್ನು ಗಳಿಸಿದರು. ಅವರು “ಜವಾನಿ ಜಾನೆಮನ್”, “ಜೋಡಿ ಬ್ರೇಕರ್ಸ್”, “ಸುಲ್ತಾನ್”, “ಗಲ್ಲಿ ಬಾಯ್” ನಂತಹ ಅನೇಕ ಬಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ, ಈ ನಟಿ ತಮ್ಮ ಜೀವನದ ಬಗ್ಗೆ ‘ಓಪನ್ ಬುಕ್’ ಎಂಬ ಪುಸ್ತಕವನ್ನು ಬರೆದಿದ್ದಾರೆ. ಈ ಪುಸ್ತಕದಲ್ಲಿ, ಆಕೆ ಗರ್ಭಿಣಿಯಾಗಿದ್ದ ವಿಷಯವನ್ನು ಬಹಿರಂಗಪಡಿಸಿದ್ದಾಳೆ. ಆದರೆ, ತಾನು ಗರ್ಭಿಣಿಯಾಗಲು ಕಾರಣವಾದ ವ್ಯಕ್ತಿಯ ಹೆಸರನ್ನು ಎಲ್ಲಿಯೂ ಬರೆದುಕೊಂಡಿಲ್ಲ. ಯಾರಿಗೂ ತಿಳಿಯದಂತೆ ರಹಸ್ಯವಾಗಿ ಗರ್ಭಪಾತ ಮಾಡಿಸಿಕೊಂಡೆ ಎಂದಷ್ಟೇ ಬರೆದಿದ್ದಾರೆ. ಇದೀಗ ಈಕೆಯ ಹೇಳಿಕೆ ಬಾಳಿವುಡ್ ನಲ್ಲಿ ಸಂಚಲನ ಉಂಟು ಮಾಡಿದೆ. ಈಕೆ ಗರ್ಭಿಣಿಯಾಗಲು ಯಾರು ಕಾರಣ ಎನ್ನುವ ಕುರಿತು ಪ್ರಶ್ನೆ ಎದ್ದಿದೆ. ಜೊತೆಗೆ ಸಿನಿಮಾ ರಂಗದಲ್ಲಿ ಹೀಗೆಲ್ಲಾ ಆಗೋದು ಕಾಮನ್ ಆದರೂ ಇದೇ ಕಾರಣಕ್ಕಾಗಿ ತಮ್ಮ ಸಿನಿ ಬದುಕಿಗೇ ಅಂತ್ಯ ಹಾಡಿದವರು ಎಷ್ಟೋ ಮಂದಿ ಎನ್ನುವುದನ್ನು ಈ ಘಟನೆ ಸೂಚಿಸುತ್ತದೆ.