ಬೆಂಗಳೂರು: ಕೆ.ಎಸ್.ಪಿ ಮೊಬೈಲ್ ಅಪ್ಲಿಕೇಶನ್ ಕರ್ನಾಟಕ ರಾಜ್ಯ ಪೊಲೀಸರ ಅಧಿಕೃತ ಮೊಬೈಲ್ ಅಪ್ಲಿಕೇಶನ್ ಆಗಿದೆ. ಆಂಡ್ರಾಯ್ಡ್ ಮತ್ತು ಐಒಎಸ್ ಎರಡೂ ವೇದಿಕೆಗಳಲ್ಲಿ ಅಪ್ಲಿಕೇಶನ್ ಲಭ್ಯವಿದೆ. ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಲಭ್ಯವಿದೆ.
ಯಾವುದೇ ನಾಗರಿಕರು ತಮ್ಮ ಯಾವುದೇ ವಿಶ್ವಾಸಾರ್ಹ ಸಂಪರ್ಕಗಳಿಗೆ ಎಸ್‌ಒಎಸ್ ಬಟನ್ ಮೂಲಕ ತುರ್ತು ಪರಿಸ್ಥಿತಿಯ ಕುರಿತು ಎಸ್.ಎಂ.ಎಸ್ ಮೂಲಕ ತಿಳಿಸಲು ಈ ಅಪ್ಲಿಕೇಶನ್ ಅನುಕೂಲ ಮಾಡುತ್ತದೆ. ಫೋನ್‌ಗಳು ಜಿಪಿಎಸ್ ಹೊಂದಿದ್ದರೆ, ನಾಗರಿಕರು ತಾವಿರುವ ಸ್ಥಳವನ್ನು ಅವರ ವಿಶ್ವಾಸಾರ್ಹ ಸಂಪರ್ಕಗಳಿಗೆ ಹಂಚಿಕೊಳ್ಳುವ ಸಾಮರ್ಥ್ಯವನ್ನು ಅಪ್ಲಿಕೇಶನ್ ಹೊಂದಿದೆ.
ಇಲ್ಲಿದೆ ನೋಡಿ KSPApp ನ ಪೂರ್ಣ ಮಾಹಿತಿ. ಇನ್ಮುಂದೆ ಅಂಗೈಯಲ್ಲಿ ಆರಕ್ಷಕರು…@JustKannada @CMofKarnataka @JnanendraAraga @DgpKarnataka @CPBlr @CPMysuru @UmeshaTweetsAKB @RajeevaVK @jakashudga @OmkarHebbayalu @Mysuru_district pic.twitter.com/j0j6xmwLZ2
— JustKannada (@JustKannada) November 26, 2022
ಮೊಬೈಲ್ ಸಹಿತ ಯಾವುದೇ ದಾಖಲೆಗಳನ್ನು ಕಳೆದುಕೊಂಡಲ್ಲಿ ನೇರವಾಗಿ ದೂರು ದಾಖಲಿಸುವ ವ್ಯವಸ್ಥೆ ಇದೆ. ತುರ್ತು ಸಂದರ್ಭದಲ್ಲಿ ಪೊಲೀಸ್, ಆಂಬುಲೆನ್ಸ್, ಅಗ್ನಿಶಾಮಕಗಳಿಗೆ ಸಂಪರ್ಕ ಸಾಧಿಸಬಹುದು. ಸೆಕೆಂಡ್ ಹ್ಯಾಂಡ್ ವಾಹನ ಗಳ ಮಾಹಿತಿ, ಪೊಲೀಸ್ ಠಾಣೆಗಳ ಮಾಹಿತಿ ಮತ್ತು ಇನ್ನಿತರ ಹಲವಾರು ಸೌಲಭ್ಯಗಳು ಈ ಅಪ್ಲಿಕೇಷನ್ ನಲ್ಲಿದೆ. ಪೊಲೀಸ್ ಇಲಾಖೆಯಿಂದ ವಿವಿಧ ಅವಶ್ಯಕತೆಗಳಿಗಾಗಿ ಸಂಪರ್ಕ ಸಾಧಿಸುವ ಏಕಗವಾಕ್ಷಿ ವ್ಯವಸ್ಥೆ ಇದಾಗಿದೆ.