ಉಡುಪಿ: ಪರ್ಕಳದ ಗೋಪಾಲ್ ಟವರ್ಸ್ ನಲ್ಲಿ “ಕ್ಷೇಮ ಪಾಲಿ ಕ್ಲಿನಿಕ್” ಉದ್ಘಾಟನೆಗೊಂಡಿತು.
ಯೋಗ ಗುರು ಗಣಪತಿ ಜೋಯಿಷ್ ಕ್ಲಿನಿಕ್ ಉದ್ಘಾಟಿಸಿ ಶುಭಹಾರೈಸಿದರು. ಕ್ಷೇಮ ಪಾಲಿ ಕ್ಲಿನಿಕ್ ಮಾಲೀಕ ರಾಧಾಕೃಷ್ಣ ಕೆ.ಜಿ. ಉಪಸ್ಥಿತರಿದ್ದರು. ಉದ್ಘಾಟನೆಯ ಪ್ರಯುಕ್ತ ಸಾರ್ವಜನಿಕರಿಗೆ ಉಚಿತ ಮಧುಮೇಹ ಹಾಗೂ ರಕ್ತ ತಪಾಸಣಾ ಶಿಬಿರವನ್ನು ಆಯೋಜಿಸಲಾಯಿತು. ನೂರಾರು ಮಂದಿ ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದರು.
ದಿನೇಶ್ ಸಂತೆಕಟ್ಟೆ ಮತ್ತು ಬಳಗ ಇವರಿಂದ “ಸಂಗೀತ ರಸಮಂಜರಿ” ಕಾರ್ಯಕ್ರಮ ನಡೆಯಿತು. ಬಳಿಕ “ಕೃಷ್ಣಾರ್ಜುನ ಕಾಳಗ” ಯಕ್ಷಗಾನ ತಾಳಮದ್ದಲೆ ಪ್ರದರ್ಶನಗೊಂಡಿತು.
ಡಾ. ಗುರುಪ್ರಸಾದ್ ಶೆಟ್ಟಿ ಎಂಡಿ ಪೀಡಿಯಾಟ್ರಿಕ್ಸ್, ಡಾ. ಅನುರಾಧಾ ಜಿಂದಾಲ್ ಎಂಡಿ ಡರ್ಮೆಟಾಲಜಿ, ಡಾ. ಶರದ್ ಮಧ್ಯಸ್ಥ ಪಿ ಎಂಡಿ ಜನರಲ್ ಮೆಡಿಸಿನ್, ಡಾ ಕೀರ್ತನ್ ಕುಮಾರ್ ಎಂಎಸ್ ಜನರಲ್ ಸರ್ಜರಿ, ಡಾ. ಮಾಲ್ಕಮ್ ನೊರೋನ್ಹಾ ಎಂಡಿ ಡರ್ಮೆಟಾಲಜಿ, ವೈದ್ಯಕೀಯ ಸೇವೆಯನ್ನು ನೀಡುವರು.