ಕೃಷಿ ಇಲಾಖೆಯಲ್ಲಿ ವಿವಿಧ ಹುದ್ದೆ: ಟೆಂಡರ್ ಆಹ್ವಾನ

ಉಡುಪಿ, ಜುಲೈ 17: ಉಡುಪಿ ಜಿಲ್ಲೆಯ ಕೃಷಿ ಇಲಾಖೆಯ ಆತ್ಮ ಹಾಗೂ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಅಗತ್ಯವಿರುವ ಸಹಾಯಕ ತಾಂತ್ರಿಕ ವ್ಯವಸ್ಥಾಪಕರ 5 ಹುದ್ದೆ, ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರ 3 ಹುದ್ದೆ, ಉಪ ಯೋಜನಾ ನಿರ್ದೇಶಕರ 1 ಹುದ್ದೆ, ಕಂಪ್ಯೂಟರ್ ಪ್ರೋಗ್ರಾಮರ್ 1 ಹುದ್ದೆ, ಜಿಲ್ಲಾ ಸಲಹೆಗಾರ 1 ಹುದ್ದೆ ಹಾಗೂ ತಾಂತ್ರಿಕ ಸಹಾಯಕರ 2 ಹುದ್ದೆಯ ಸೇವೆಯನ್ನು ಪಡೆಯುವ ಬಗ್ಗೆ ಸೇವೆಯನ್ನು ಖಾಸಗಿ ಸಂಸ್ಥೆಗಳಿಂದ ಹೊರಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ಪಡೆದುಕೊಳ್ಳಲು ಇಚ್ಛೆಯುಳ್ಳ ಸಂಸ್ಥೆಗಳಿಂದ e-Procurement ಟೆಂಡರ್ ದಸ್ತಾವೇಜಿನಲ್ಲಿ ತಿಳಿಸಿರುವ ನಿಬಂಧನೆಗಳು ಮತ್ತು ಷರತ್ತುಗಳಿಗೆ ಒಳಪಟ್ಟು ಅಲ್ಪಾವಧಿ ಟೆಂಡರ್‍ನ್ನು ಆಹ್ವಾನಿಸಲಾಗಿದೆ. ಇಚ್ಛೆಯುಳ್ಳ ಸಂಸ್ಥೆಯವರು ಟೆಂಡರ್ ಅರ್ಜಿಯನ್ನು ಇ-ಪೇಮೆಂಟ್ ಮುಖಾಂತರ ಸಲ್ಲಿಸಬೇಕು. (ಕ್ರೆಡಿಟ್ / ಡೆಬಿಟ್ ಕಾರ್ಡ್ ಮುಖಾಂತರ ಅಥವಾ NEFT ಚಲನ್ ಮೂಲಕ) ಭರ್ತಿ ಮಾಡಿದ ಇ-ಟೆಂಡರ್‍ಗಳನ್ನು ಆಗಸ್ಟ್ 16 ರ ಒಳಗೆ www.eproc.karnataka.gov.in ನಲ್ಲಿ ಭರ್ತಿ ಮಾಡಿ ಸಲ್ಲಿಸಬಹುದಾಗಿದೆ. ಇ-ಟೆಂಡರ್‍ನ್ನು ಆಗಸ್ಟ್ 17 ರ ಸಂಜೆ 4 ಗಂಟೆಗೆ ತೆರೆಯಲಾಗುವುದು. ಹೆಚ್ಚಿನ ಮಾಹಿತಿಗಾಗಿ ಜಂಟಿ ಕೃಷಿ ನಿರ್ದೇಶಕರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.