ಕ್ರೋಧಿ ಸಂವತ್ಸರ ತಿಥಿನಿರ್ಣಯ ಪಂಚಾಂಗ ಬಿಡುಗಡೆ

ಉಡುಪಿ: ಜಗದ್ಗುರು ಶ್ರೀಮಧ್ವಾಚಾರ್ಯರ ತಿಥಿ ನಿರ್ಣಯಾನುಸಾರಿ ಗಣಿತದಿಂದ ಹಾಗೂ ಭಾವೀಸಮೀರ ಶ್ರೀವಾದಿರಾಜಗುರು ಸಾರ್ವಭೌಮರ ಏಕಾದಶಿ ನಿರ್ಣಯಾನುಸಾರಿ ತಿಥಿ ವೃದ್ಧಿ-ಹ್ರಾಸ ನಿಯಮದಿಂದ ಉಡುಪಿ ಶ್ರೀಕೃಷ್ಣಾಪುರ ಮಠದಿಂದ ರಚಿತವಾದ “ಕ್ರೋಧಿ” ನಾಮ ಸಂವತ್ಸರದ ‘ತಿಥಿನಿರ್ಣಯ’ ಪಂಚಾಂಗವನ್ನು ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರತೀರ್ಥ ಸ್ವಾಮೀಜಿಗಳು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ವಿದ್ವಾಂಸ ಬನ್ನಂಜೆ ಗೋಪಾಲಕೃಷ್ಣ ಉಪಾಧ್ಯಾಯರು ಹಾಗೂ ಮಠದ ಅಧಿಕಾರಿವಾದಿರಾಜ ಆಚಾರ್ಯ ಉಪಸ್ಥಿತರಿದ್ದರು.