ಕುಲಾಲ ಸಂಘ ರಿ. ಪೆರ್ಡೂರು ಇದರ 2022-23ನೇ ಸಾಲಿನ ಅವಧಿಗೆ ನೂತನ ಅಧ್ಯಕ್ಷರಾಗಿ ಕೃಷ್ಣಪ್ಪ ಕುಲಾಲ್ ಹಿರಿಯಡಕ ಅವರು ಆಯ್ಕೆಯಾಗಿದ್ದಾರೆ.
ಸಂಘದ ಗೌರವಾಧ್ಯಕ್ಷರಾಗಿ ರಾಮ ಕುಲಾಲ್ ಪಕ್ಕಾಲು ಮತ್ತು ಐತು ಕುಲಾಲ್ ಕನ್ಯಾನ, ಉಪಾಧ್ಯಕ್ಷರಾಗಿ ಕಾಳು ಕುಲಾಲ್ ಪೆರ್ಡೂರು, ಪ್ರಧಾನ ಕಾರ್ಯದರ್ಶಿಯಾಗಿ ಹರೀಶ್ ಕುಲಾಲ್ ಹಂದಿಬೆಟ್ಟು, ಜೊತೆ ಕಾರ್ಯದರ್ಶಿಯಾಗಿ ಗಣೇಶ್ ಕುಲಾಲ್ ಪಕ್ಕಾಲು, ಕೋಶಾಧಿಕಾರಿಯಾಗಿ ಯೋಗೀಶ್ ಕುಲಾಲ್ ಬೋರುಗುಡ್ಡೆ, ಸಂಘಟನಾ ಕಾರ್ಯದರ್ಶಿಯಾಗಿ ಕೃಷ್ಣ ಕುಲಾಲ್ ಕುಂಟಲ್ ಕಟ್ಟೆ ಹಾಗೂ ಸಹ ಸಂಘಟನಾ ಕಾರ್ಯದರ್ಶಿಯಾಗಿ ಸಂತೋಷ್ ಕುಲಾಲ್ ಕುಕ್ಕೆಹಳ್ಳಿ ಅವರು ನೇಮಕಗೊಂಡಿದ್ದಾರೆ.