ಉಡುಪಿ: ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀಪಲಿಮಾರು ಮಠದ ಆಶ್ರಯದಲ್ಲಿ, ಶ್ರೀಧನ್ವಂತರಿ ಚಿಕಿತ್ಸಾಲಯ,ಲಯನ್ಸ್ ಕ್ಲಬ್ ಅಂಬಲಪಾಡಿ ಮತ್ತು ಲಯನ್ಸ್ ಕ್ಲಬ್ ಕಲ್ಯಾಣಪುರ ಇವರ ಆಯೋಜನೆಯಲ್ಲಿ ನಡೆದ ಬೃಹತ್ ಉಚಿತ ಚರ್ಮರೋಗ ತಪಾಸಣೆ ಹಾಗು ಹೃದಯ ರೋಗ ತಪಾಸಣಾ ಶಿಬಿರವನ್ನು ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ವೈದ್ಯರುಗಳಾದ ಡಾ.ಸತೀಶ್ ಪೈ, ಡಾ.ಸುಧೀರ್ ನಾಯಕ್, ಡಾ.ನಿಶಾಂತ್ ಶೆಟ್ಟಿ, ಡಾ.ರವೀಂದ್ರ, ಡಾ.ನರಸಿಂಹ ರಾವ್ ಮತ್ತು ಲ|ಪಿ.ಎಲ್.ಭಟ್, ಶ್ರೀನಿವಾಸ ರಾವ್ ಮೊದಲಾದವರು ಉಪಸ್ಥಿತರಿದ್ದರು.