ಶ್ರೀಕೃಷ್ಣಮಠದಲ್ಲಿ ಗಾಳಿಯಿಂದ ನೀರು ಉತ್ಪಾದಿಸುವ ಯಂತ್ರ ಉದ್ಘಾಟನೆ

  ಉಡುಪಿ: ಶ್ರೀಕೃಷ್ಣಮಠದಲ್ಲಿ ಮುಂಬೈ ಮೂಲದ ಏರ್ ಓ ವಾಟರ್ ಕಂಪನಿಯ ವತಿಯಿಂದ ನೀಡಿದ ಗಾಳಿಯಿಂದ ನೀರು ಉತ್ಪಾದಿಸುವ ಯಂತ್ರವನ್ನು ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕಂಪನಿಯ ಅಧಿಕಾರಿಗಳಾದ ಸುರೇಶ್ ಅಂಚನ್ ಮತ್ತು ಪ್ರತಾಪ್ ಕೋಟ್ಯಾನ್ ಉಪಸ್ಥಿತರಿದ್ದರು. ಯಂತ್ರವು ಪ್ರಕೃತಿಯ ಉಷ್ಣತೆಯನ್ನು ಶುದ್ಧ ಕುಡಿಯುವ ನೀರನ್ನಾಗಿ ಪರಿವರ್ತಿಸುವುದು ವಿಶೇಷವಾಗಿದೆ. ಇದೊಂದು ಅಂತಾರಾಷ್ಟ್ರೀಯ ಪೇಟೆಂಟ್ ಪಡೆದ ನೀರು ಉತ್ಪಾದನಾ ಕಂಪನಿಯಾಗಿದೆ.  ಈ ಕಂಪನಿಯು ಅಮೆರಿಕೆಯಿಂದ 6 ಮತ್ತು ಭಾರತದೇಶದಿಂದ 3 ಪೇಟೆಂಟುಗಳನ್ನು ಹೊಂದಿದೆ. ದಿನಕ್ಕೆ 25 ಲೀಟರಿನಿಂದ 1000 ಲೀಟರುಗಳಷ್ಟು ನೀರನ್ನು ಉತ್ಪಾದಿಸುವ ಸಾಮರ್ಥ್ಯವುಳ್ಳ ಯಂತ್ರಗಳನ್ನು ತಯಾರಿಸುತ್ತದೆ. ಪ್ರಸ್ತುತ ಶ್ರೀಕೃಷ್ಣಮಠಕ್ಕೆ ದಾನವಾಗಿ ಕೊಟ್ಟಿರುವ ಯಂತ್ರವು ದಿನಕ್ಕೆ 25 ಲೀಟರಿನಷ್ಟು ಪರಿಶುದ್ಧ ನೀರನ್ನು ಉತ್ಪಾದಿಸುತ್ತದೆ.  ಬೇಸಿಗೆಯಲ್ಲಿ ಉಂಟಾಗುವ ನೀರಿನ ಅಭಾವನ್ನು ಕಂಪನಿಯು ತೊಡೆದುಹಾಕುವಂತೆ ಆಗಲಿ ಎಂದು ಶ್ರೀಶ್ರೀಪಾದರು ಹೇಳಿದರು. ಈ ಸಂದರ್ಭದಲ್ಲಿ ವಿದ್ವಾನ್ ಗಿರೀಶ ಉಪಾಧ್ಯಾಯ ಮತ್ತು ಶ್ರೀಮಠದ ಪಿ.ಆರ್.ಓ ಶ್ರೀಶಭಟ್ ಕಡೆಕಾರ್ ಉಪಸ್ಥಿತರಿದ್ದರು.