ಉಡುಪಿ: ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಉಡುಪಿ ಕೃಷ್ಣಮಠದಲ್ಲಿ ಸರಳ ಹಾಗೂ ಸಾಂಪ್ರದಾಯಿಕ ರೀತಿಯಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿ ಉತ್ಸವ ನಡೆಯಲಿದೆ.
ಇಂದು (ಆ. 30) ಮತ್ತು ಆ. 31ರಂದು ನಡೆಯಲಿರುವ ಕೃಷ್ಣಜನ್ಮಾಷ್ಟಮಿಯಲ್ಲಿ ಯಾವುದೆಲ್ಲ ಇರಲಿದೆ?., ಯಾವುದಿಲ್ಲ ಎಂಬ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.
ಯಾವುದಕ್ಕೆಲ್ಲ ಅವಕಾಶ:
1. ನಿಗದಿತ ಸಮಯದಲ್ಲಿ ಕೃಷ್ಣ ದೇವರ ದರ್ಶನಕ್ಕೆ ಅವಕಾಶ.
2. ಅರ್ಘ್ಯ ಪ್ರದಾನಕ್ಕೆ ಮೂರು ಕಡೆ ವ್ಯವಸ್ಥೆ.
3. ಉತ್ಸವದ ನಂತರ ಉಂಡೆ ಚಕ್ಕುಲಿ ವಿತರಣೆ.
4. C4U ಚ್ಯಾನೆಲ್ ನಲ್ಲಿ ನೇರಪ್ರಸಾರ.
5. ಮಠದಲ್ಲಿ ನಡೆಯಬೇಕಾದ ಎಲ್ಲಾ ಸಾಂಪ್ರಾದಾಯಿಕ ಆಚರಣೆಗಳು ನಡೆಯುತ್ತವೆ.
6. ಅನ್ ಲೈನ್ ಮುದ್ದು ಕೃಷ್ಣ ಸ್ಪರ್ಧೆ
ಏನಿಲ್ಲ:
1. ವಿಟ್ಲಪಿಂಡಿಗೆ ಸಾರ್ವಜನಿಕರಿಗೆ ಅವಕಾಶವಿಲ್ಲ
2. ಕೆಲವೊಂದು ಸಾಮಾಜಿಕ ಉದ್ದೇಶದಿಂದ ಹಾಕುವ ವೇಷಗಳನ್ನು ಹೊರತುಪಡಿಸಿ ಉಳಿದಂತೆ ವೇಷಧಾರಿಗಳಿಗೆ ಜಿಲ್ಲಾಡಳಿತದಿಂದ ಅವಕಾಶ ಇಲ್ಲ.
4. ವಿಟ್ಲಪಿಂಡಿಯಂದು ಸಾರ್ವಜನಿಕ ಅನ್ನಸಂತರ್ಪಣೆ ಇರುವುದಿಲ್ಲ.
5. ಕೃಷ್ಣಮಠದಲ್ಲಿ ನಡೆಯುತ್ತಿದ್ದ ವಿವಿಧ ಸ್ಪರ್ಧೆಗಳು ಇರುವುದಿಲ್ಲ.
6. ರಥ ಬೀದಿಯಲ್ಲಿ ಸಾಂಸ್ಕೃತಿಕ ವೇದಿಕೆಗಳು ಇರುವುದಿಲ್ಲ.