ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ಸ್ವರ ಕಂಠೀರವ ಕಾರ್ಯಕ್ರಮ

ಉಡುಪಿ:   ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ವತಿಯಿಂದ,ಮಧುರ ತರಂಗ  ಮಂಗಳೂರು ಇವರು ಆಯೋಜಿಸಿರುವ ಜೂನಿಯರ್ ರಾಜಕುಮಾರ್ ಜಗದೀಶ್ ಶಿವಪುರ ಇವರ ಸಂಗೀತ ಕ್ಷೇತ್ರದ ಐದು ದಶಕಗಳ ಸಾಧನೆಯ ಸುವರ್ಣಮಹೋತ್ಸವ “ಸ್ವರ ಕಂಠೀರವ” ಕಾರ್ಯಕ್ರಮವನ್ನು ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಠದ ದಿವಾನರಾದ ಶಿಬರೂರು ವೇದವ್ಯಾಸ ತಂತ್ರಿ,ಜಗದೀಶ್ ಶಿವಪುರ ಮೊದಲಾದವರು ಉಪಸ್ಥಿತರಿದ್ದರು.