ಶ್ರೀಕೃಷ್ಣ ಮಠ:”ಸಂಸ್ಕಾರ ಪ್ರದೀಪ” ಬಿಡುಗಡೆ

ಉಡುಪಿ:  ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ,ಶಿವಳ್ಳಿ ಬ್ರಾಹ್ಮಣ ಪುರೋಹಿತ ಸಂಘದ ವಿಂಶತ್ಯುತ್ಸವದಲ್ಲಿ ‘ಷೋಡಶ ಸಂಸ್ಕಾರ’ ಗಳ ಕುರಿತು ಹಲವಾರು ಪುರೋಹಿತ ವಿದ್ವಾಂಸರಿಂದ ಪುರೋಹಿತಗೋಷ್ಠಿಗಳನ್ನು ನಡೆಸಲು ಅವಕಾಶವನ್ನಿತ್ತು ಅನುಗ್ರಹ ಸಂದೇಶವನ್ನು ನೀಡಿ ಪ್ರೋತ್ಸಾಹಿಸಿದ ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು “ಸಂಸ್ಕಾರ ಪ್ರದೀಪ”  ಎಂಬ ಗ್ರಂಥವನ್ನು ಬಿಡುಗಡೆಗೂಳಿಸಿ ಅನುಗ್ರಹಿಸಿದರು.

ಪಲಿಮಾರು ಕಿರಿಯ ಯತಿಗಳಾದ ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಆಶೀರ್ವಚನ ನೀಡಿ ಹರಸಿದರು.ರಾಜ್ಯ ವಿಶ್ವಹಿಂದೂ ಪರಿಷತ್ತಿನ ಅಧ್ಯಕ್ಷರಾದ ಎಂ.ಬಿ.ಪುರಾಣಿಕ್ ಶುಭ ಹಾರೈಸಿದರು.ಶಿವಳ್ಳಿ ಬ್ರಾಹ್ಮಣ ಪುರೋಹಿತ ಸಂಘದ ಅಧ್ಯಕ್ಷರಾದ ಶ್ರೀ ಕೆ.ರಾಮದಾಸ್ ಭಟ್  ಪ್ರಸ್ತಾವನೆಗೈದರು.